ಭಾರತ-ನ್ಯೂಜಿಲೆಂಡ್ ಮುಖಾಮುಖಿ ದಾಖಲೆ

By Prasanna Kumar P N
Feb 27, 2025

Hindustan Times
Kannada

ಭಾರತ-ನ್ಯೂಜಿಲೆಂಡ್ ತಂಡಗಳು ಮಾರ್ಚ್​ 2ರಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ತಲಾ 2 ಗೆಲುವುಗಳೊಂದಿಗೆ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಉಭಯ ತಂಡಗಳು, ಔಪಚಾರಿಕ ಪಂದ್ಯದಲ್ಲಿ ಸೆಣಸಲು ಸಜ್ಜಾಗಿವೆ.

ಹಾಗಿದ್ದರೆ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಉಭಯ ತಂಡಗಳ ನಡುವಿನ ದಾಖಲೆ ಹೇಗಿದೆ? ಇಲ್ಲಿದೆ ವಿವರ.

ಒಡಿಐ ಕ್ರಿಕೆಟ್​ನಲ್ಲಿ ಒಟ್ಟು 118 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ತಂಡವೇ ಮೇಲುಗೈ ಸಾಧಿಸಿದೆ.

ಭಾರತ ತಂಡವು 60ರಲ್ಲಿ ಗೆದ್ದಿದ್ದರೆ, 50ರಲ್ಲಿ ಕಿವೀಸ್ ಜಯದ ಸಿಹಿ ಕಂಡಿದೆ. ಆದರೆ 7 ಪಂದ್ಯ ಫಲಿತಾಂಶ ಇಲ್ಲದೆ ಅಂತ್ಯ ಕಂಡಿದ್ದರೆ, 1 ಪಂದ್ಯ ಟೈ ಆಗಿದೆ.

ತಮ್ಮ ತವರು ದೇಶಗಳ ಬದಲಿಗೆ ತಟಸ್ಥ ಸ್ಥಳದಲ್ಲಿ ಭಾರತ 15, ನ್ಯೂಜಿಲೆಂಡ್ 16 ಪಂದ್ಯಗಳಲ್ಲಿ ಜಯಿಸಿದೆ.

2020 ರಿಂದ ಇಲ್ಲಿಯ ತನಕ ಒಟ್ಟು 11 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 5, ನ್ಯೂಜಿಲೆಂಡ್ 4ರಲ್ಲಿ ಜಯದ ನಗೆ ಬೀರಿವೆ. 2 ಪಂದ್ಯಗಳಿಂದ ಫಲಿತಾಂಶ ಬಂದಿಲ್ಲ.

ರಂಬುಟಾನ್ ಹಣ್ಣಿನ ಆರೋಗ್ಯ ಪ್ರಯೋಜನಗಳಿವು