ಇದೇ ವರ್ಷ ಭಾರತ vs ಪಾಕಿಸ್ತಾನ ಮತ್ತೆ ಮುಖಾಮುಖಿ

By Prasanna Kumar P N
Feb 25, 2025

Hindustan Times
Kannada

ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡವನ್ನು ಭಾರತ 6 ವಿಕೆಟ್​ಗಳಿಂದ ಸೋಲಿಸಿತು. 

ಮತ್ತೊಂದೆಡೆ ಭಾರತ ಸೆಮಿಫೈನಲ್​ಗೆ ಪ್ರವೇಶಿಸಿದರೆ, ಪಾಕಿಸ್ತಾನ ಟೂರ್ನಿಯಿಂದಲೇ ಅಧಿಕೃತವಾಗಿ ಹೊರಬಿದ್ದಿದೆ.

ಒಂದ್ವೇಳೆ ಪಾಕಿಸ್ತಾನ ಕೂಡ ಸೆಮಿಫೈನಲ್​ ಪ್ರವೇಶಿಸಿದ್ದರೆ ಮತ್ತೊಮ್ಮೆ ಭಾರತದ ವಿರುದ್ಧ ಸೆಣಸಾಟಕ್ಕೆ ಅವಕಾಶ ಸಿಗಲಿದೆ ಎಂದು ಅಭಿಮಾನಿಗಳು ಕಾದಿದ್ದರು.

ಅಂದರೆ ಸೆಮಿಫೈನಲ್​ನಲ್ಲಿ ಉಭಯ ತಂಡಗಳು ಗೆಲುವು ಸಾಧಿಸಿದ್ದರೆ ಫೈನಲ್​ನಲ್ಲಿ ಮುಖಾಮುಖಿಯಾಗುತ್ತವೆ ಎನ್ನುವ ನಂಬಿಕೆ ಇತ್ತು. ಆದರೀಗ ನಿರೀಕ್ಷೆ ಹುಸಿಯಾಗಿದೆ.

ಇದರ ಬೆನ್ನಲ್ಲೇ ಭಾರತ-ಪಾಕಿಸ್ತಾನ ನಡುವೆ ಮುಂದಿನ ಪಂದ್ಯ ಯಾವಾಗ ಇರಲಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದೇ ವರ್ಷ ನಾಲ್ಕೈದು ಬಾರಿ ಮುಖಾಮುಖಿ ಸಾಧ್ಯತೆ ಇದೆ.

ಹೌದು, 2025ರ ಅಂತ್ಯ ಅಥವಾ 2026ರಲ್ಲಿ ಆರಂಭವಾಗುವ ಏಷ್ಯಾಕಪ್​ನಲ್ಲಿ ಮತ್ತೆ ಮುಖಾಮುಖಿ ಆಗಬಹುದು. ಜತೆಗೆ ಇದೇ ವರ್ಷ ಜರುಗುವ ಮಹಿಳೆಯರ ಏಕದಿನ ವಿಶ್ವಕಪ್, ಏಷ್ಯಾಕಪ್​ನಲ್ಲೂ ಎರಡು ತಂಡಗಳು ಮುಖಾಮುಖಿ ಸಾಧ್ಯತೆ ಇದೆ.

ಮುಂದಿನ ವರ್ಷ ಟಿ20 ವಿಶ್ವಕಪ್​ ನಡೆಯಲಿದೆ. ಅದಕ್ಕೂ ಮುನ್ನ ಏಷ್ಯಾಕಪ್ ನಡೆಯಲಿದೆ. ಟೂರ್ನಿಯಲ್ಲಿ ಭಾರತ, ಪಾಕ್ ಜೊತೆಗೆ ಬಾಂಗ್ಲಾದೇಶ, ನೇಪಾಳ, ಅಫ್ಘಾನಿಸ್ತಾನ, ಶ್ರೀಲಂಕಾ, ಯುಎಇ ತಂಡಗಳು ಕಣಕ್ಕಿಳಿಯಲಿವೆ.

ಏಷ್ಯಾಕಪ್ ಟೂರ್ನಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಭಾರತ ಮತ್ತು ಪಾಕಿಸ್ತಾನ ಎ ಗುಂಪಿನಲ್ಲಿ ಸೆಣಸಾಟ ನಡೆಸಲಿವೆ.

ಎ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದರೆ ಉಭಯ ತಂಡಗಳು ಸೂಪರ್​-4ಗೆ ಪ್ರವೇಶಿಸಲಿದ್ದು, ಅಲ್ಲಿಯೂ ಮತ್ತೊಮ್ಮೆ ಸೆಣಸಾಟ ನಡೆಸಲಿವೆ. ಬಳಿಕ ಫೈನಲ್​ಗೆ ಅರ್ಹತೆ ಪಡೆದರೂ ಮತ್ತೆ ಮುಖಾಮುಖಿಯಾಗಲಿವೆ.

ಇದಕ್ಕೂ ಮುನ್ನ ಭಾರತ ಮಹಿಳೆಯರ ತಂಡ ಮತ್ತು ಪಾಕಿಸ್ತಾನ ಮಹಿಳೆಯರ ತಂಡಗಳು ಎರಡು ಮುಖಾಮುಖಿಯಾಗಲಿವೆ.

ಏಕೆಂದರೆ ಇದೇ ವರ್ಷ ಭಾರತದಲ್ಲಿ ಮಹಿಳೆಯರ ಏಕದಿನ ವಿಶ್ವಕಪ್ ನಡೆಯಲಿದೆ. ಅದಕ್ಕೂ ಮುನ್ನ ಜರುಗುವ ಏಷ್ಯಾಕಪ್ ಬಳಿಕ ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

Horoscope: ಸಮಸ್ಯೆಗಳನ್ನು ಸರಿಪಡಿಸುತ್ತೀರಿ; ಏಪ್ರಿಲ್ 23ರ ಬುಧವಾರದ ದಿನ ಭವಿಷ್ಯ