ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ವಿರಾಟ್ ಅವರು 2017ರಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾದರು. ಈ ದಂಪತಿಗೆ ಈಗ ಇಬ್ಬರು ಮಕ್ಕಳು.
ವಿರಾಟ್ ಮತ್ತು ಅನುಷ್ಕಾ ಬಹಳ ದಿನಗಳ ಕಾಲ ಡೇಟಿಂಗ್ ನಡೆಸಿದ ನಂತರ ಮದುವೆಯಾಗಲು ನಿರ್ಧರಿಸಿದರು.
ವಿರುಷ್ಕಾ ಅವರ ಪ್ರೇಮಕಥೆ 2013ರಲ್ಲಿ ಪ್ರಾರಂಭವಾಯಿತು. ನಂತರ ಈ ಜೋಡಿ ಶಾಂಪೂ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿತು
ಒಂದು ಕಾಲದಲ್ಲಿ ಅವರಿಬ್ಬರ ಸಂಬಂಧ ಮುರಿದುಬಿದ್ದಿತ್ತು ಎಂಬ ಸುದ್ದಿ ಹರಿದಾಡಿತ್ತು. ನಂತರ ಅಂತಹದ್ದೇನೂ ಇಲ್ಲ ಎಂದು ತಿಳಿದು ಬಂತು.
ಜನಪ್ರಿಯ ದಂಪತಿಗಳ ನಡುವಿನ ಹೇಗಿದೆ ಎಂಬುದು ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
pinterest
ಅನುಷ್ಕಾ ಆಗಾಗ್ಗೆ ಮೈದಾನಕ್ಕೆ ಬಂದು ಪತಿಯನ್ನು ಹುರಿದುಂಬಿಸುವುದನ್ನು ಕಾಣಬಹುದು. ವಿರಾಟ್ ಶತಕ ಬಾರಿಸಿದಾಗಲೆಲ್ಲಾ ಪ್ರೀತಿಯನ್ನು ವ್ಯಕ್ತಪಡಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.
ವಿರಾಟ್ ಮತ್ತು ಅನುಷ್ಕಾ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಅದ್ಭುತವಾಗಿ ನಿರ್ವಹಿಸುವ ಮೂಲಕ ಮಾದರಿಯಾಗಿದ್ದಾರೆ.
ಅನುಷ್ಕಾ ತನ್ನ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಕೊಹ್ಲಿ ಹಲವು ಬಾರಿ ಹೇಳಿದ್ದಾರೆ.
36 ವರ್ಷದ ಕೊಹ್ಲಿ ಇದುವರೆಗೆ 123 ಟೆಸ್ಟ್ ಪಂದ್ಯ, 295 ಏಕದಿನ, 125 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ನಲ್ಲಿ 252 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.