ಇನ್‌ಸ್ಟಾಗ್ರಾಮ್‌ನಲ್ಲಿ ಆರ್‌ಸಿಬಿ ಮತ್ತೊಂದು ದಾಖಲೆ

By Jayaraj
Apr 22, 2025

Hindustan Times
Kannada

ಐಪಿಎಲ್‌ 18ನೇ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಉತ್ತಮ ಫಾರ್ಮ್‌ನಲ್ಲಿದೆ. ಈ ಬಾರಿ ತಂಡದ ಅಭಿಮಾನಿಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಈ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಆರ್‌ಸಿಬಿ ತಂಡ ಮತ್ತೊಂದು ದಾಖಲೆ ನಿರ್ಮಿಸಿದೆ.

ಪ್ರಸಕ್ತ ಆವೃತ್ತಿಯ ಆರಂಭದಲ್ಲಿ ಫಾಲೊವರ್‌ಗಳ ವಿಷಯದಲ್ಲಿ ಆರ್‌ಸಿಬಿ ಮೂರು ದಾಖಲೆ ನಿರ್ಮಿಸಿದೆ.

ಸಿಎಸ್‌ಕೆ ತಂಡದ ಫಾಲೊವರ್‌ಗಳ ಸಂಖ್ಯೆಯನ್ನು ಮೀರಿಸುವ ಮೂಲಕ, ಐಪಿಎಲ್‌ನಲ್ಲಿ ಅತಿ ಹೆಚ್ಚು ಫಾಲೊವರ್‌ಗಳಿರುವ ತಂಡ ಎಂಬ ದಾಖಲೆ ನಿರ್ಮಿಸಿತು.

ಅದರ ಬೆನ್ನಲ್ಲೇ 18 ಮಿಲಿಯನ್‌ (ಒಂದು ಕೋಟಿ 80 ಲಕ್ಷ) ಫಾಲೊವರ್‌ಗಳನ್ನು ಸಂಪಾದಿಸಿದ ಐಪಿಎಲ್‌ನ ಮೊದಲ ತಂಡ ಎನಿಸಿಕೊಂಡಿತು.

ಇದೀಗ ಕೆಲವೇ ದಿನಗಳ ಅಂತರದಲ್ಲಿ ಆರ್‌ಸಿಬಿ ಮತ್ತೊಂದು ದಾಖಲೆ ಮಾಡಿದೆ. 

ಏಕಾಏಕಿ 10 ಲಕ್ಷಕ್ಕೂ ಹೆಚ್ಚು ಫಾಲೊವರ್‌ಗಳನ್ನು ಸಂಪಾದಿಸಿದ ತಂಡ, ಇದೀಗ 19 ಮಿಲಿಯನ್‌ (1 ಕೋಟಿ 90 ಲಕ್ಷ) ಬೆಂಬಲಿಗರನ್ನು ಪಡೆದಿದೆ.

ಐಪಿಎಲ್‌ 18ನೇ ಆವೃತ್ತಿ ಇನ್ನೂ ಕೆಲವು ವಾರಗಳ ಕಾಲ ನಡೆಯಲಿದ್ದು, ಅಷ್ಟರಲ್ಲಿ 20 ಮಿಲಿಯನ್‌ ತಲುಪುವ ನಿರೀಕ್ಷೆ ಇದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೊವರ್‌ಗಳಿರುವ ಐಪಿಎಲ್ ತಂಡ ಎಂಬ ದಾಖಲೆ ಆರ್‌ಸಿಬಿಯದ್ದು.

PTI

2025ರ ಏಷ್ಯಾದ 10 ವಿಶ್ವವಿದ್ಯಾಲಯಗಳಿವು; ಭಾರತದ ಒಂದು ಯೂನಿವರ್ಸಿಟಿಗೂ ಸಿಕ್ಕಿಲ್ಲ ಸ್ಥಾನ!