ಐಪಿಎಲ್: ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಬೌಲರ್ಸ್

By Prasanna Kumar PN
Mar 19, 2025

Hindustan Times
Kannada

ಲಕ್ಷ್ಮಿಪತಿ ಬಾಲಾಜಿ: 2008ರ ಮೇ 10ರಂದು ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಪರ ಹ್ಯಾಟ್ರಿಕ್ ಪಡೆದರು.

ಅಮಿತ್ ಮಿಶ್ರಾ: 2008ರ ಮೇ 15ರಂದು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಡೆಲ್ಲಿ ಡೇರ್​ ಡೆವಿಲ್ಸ್​ (ಡೆಲ್ಲಿ ಕ್ಯಾಪಿಟಲ್ಸ್) ಪರವಾಗಿ ಹ್ಯಾಟ್ರಿಕ್ ಕಬಳಿಸಿದರು.

ಯುವರಾಜ್​ ಸಿಂಗ್​: 2009ರ ಮೇ 1ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಹ್ಯಾಟ್ರಿಕ್ ಪಡೆದಿದ್ದರು.

ರೋಹಿತ್​ ಶರ್ಮಾ: 2009ರ ಮೇ 6ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಡೆಕ್ಕನ್ ಚಾರ್ಜರ್ಸ್ ಪರ ಹ್ಯಾಟ್ರಿಕ್ ಸಾಧಿಸಿದ್ದರು.

ಪ್ರವೀಣ್ ಕುಮಾರ್: 2010ರ ಮಾರ್ಚ್​ 18ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್​ಸಿಬಿ ಪರ ಹ್ಯಾಟ್ರಿಕ್ ಕಿತ್ತಿದ್ದರು.

ಅಜಿತ್ ಚಂಡೀಲಾ: 2012ರ ಮೇ 5ರಂದು ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪರ ಈ ಸಾಧನೆ ಮಾಡಿದ್ದರು.

ಅಕ್ಷರ್​ ಪಟೇಲ್: 2016ರ ಮೇ 5ರಂದು ಗುಜರಾತ್ ಲಯನ್ಸ್ ವಿರುದ್ಧ ಡೆಲ್ಲಿ ಡೇರ್​ ಡೆವಿಲ್ಸ್ ಪರ ಹ್ಯಾಟ್ರಿಕ್ ಪಡೆದಿದ್ದರು.

ಪ್ರವೀಣ್ ತಾಂಬೆ: 2014ರ ಮೇ 5ರಂದು ಕೆಕೆಆರ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ಪರ ಹ್ಯಾಟ್ರಿಕ್ ಕಿತ್ತಿದ್ದರು.

ಜಯದೇವ್ ಉನಾದ್ಕತ್: 2017ರ ಮೇ 6ರಂದು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ರೈಸಿಂಗ್ ಪುಣೆ ಸೂಪರ್​ಜೈಂಟ್ಸ್​ ಪರ ಹ್ಯಾಟ್ರಿಕ್ ವಿಕೆಟ್ ಪಡೆದರು.

ಶ್ರೇಯಸ್ ಗೋಪಾಲ್: 2019ರ ಮೇ 14ರಂದು ಆರ್​ಸಿಬಿ ಎದುರು ರಾಜಸ್ಥಾನ ಪರ ಈ ಸಾಧನೆ ಮಾಡಿದ್ದರು.

ಹರ್ಷಲ್ ಪಟೇಲ್: 2021ರ ಏಪ್ರಿಲ್​ 9ರಂದು ಮುಂಬೈ ಎದುರು ಆರ್​​ಸಿಬಿ ಪರ ಹ್ಯಾಟ್ರಿಕ್ ಪಡೆದರು.

ಯುಜ್ವೇಂದ್ರ ಚಹಲ್: 2022ರ ಐಪಿಎಲ್​ನಲ್ಲಿ ಕೆಕೆಆರ್​ ವಿರುದ್ದ ರಾಜಸ್ಥಾನ ಪರ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು.

ರಶೀದ್ ಖಾನ್, ಸ್ಯಾಮುಯಲ್ ಬದ್ರಿ, ಆ್ಯಂಡ್ರೂ ಟೈ, ಶೇನ್ ವ್ಯಾಟ್ಸನ್, ಸ್ಯಾಮ್ ಕರನ್, ಮಖಾಯ ಎನ್ಟಿನಿ, ಸುನಿಲ್ ನರೇನ್ ಅವರು ಐಪಿಎಲ್​ನಲ್ಲಿ ಹ್ಯಾಟ್ರಿಕ್ ಪಡೆದ ವಿದೇಶಿ ಆಟಗಾರರು.

ರಾಯಲ್ ಎನ್‌ಫೀಲ್ಡ್‌ ಆಕರ್ಷಕ ಫ್ಲೈಯಿಂಗ್ ಫ್ಲೀ ಎಲೆಕ್ಟ್ರಿಕ್ ಬೈಕ್