ವಿಜಯ್‌ ಹಜಾರೆ ಟ್ರೋಫಿ: IPL ಅನ್‌ಸೋಲ್ಡ್‌ ಆಟಗಾರನ ಸಿಡಿಲಬ್ಬರ

By Jayaraj
Jan 06, 2025

Hindustan Times
Kannada

ವಿಜಯ್‌ ಹಜಾರೆ ಟ್ರೋಫಿಯಲ್ಲಿ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ.

ಭಾನುವಾರ (ಜ.5)ನಡೆದ ಪಂದ್ಯದಲ್ಲಿ ನಾಗಾಲ್ಯಾಂಡ್ ವಿರುದ್ಧ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿದ್ದರು.

ಪ್ರಸಕ್ತ ಆವೃತ್ತಿಯ ವಿಜಯ್‌ ಹಜಾರೆ ಟ್ರೋಫಿಯಲ್ಲಿ, ಮಯಾಂಕ್ ಅಗರ್ವಾಲ್ ಪ್ರಸ್ತುತ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.

7 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ 153.25ರ ಸರಾಸರಿ ಮತ್ತು 111.66 ಸ್ಟ್ರೈಕ್ ರೇಟ್‌ನಲ್ಲಿ 613 ರನ್ ಗಳಿಸಿದ್ದಾರೆ. 

ನಾಲ್ಕು ಸ್ಫೋಟಕ ಶತಕ ಸಿಡಿಸಿರುವ ಮಯಾಂಕ್‌, ಕರ್ನಾಟಕ ತಂಡವನ್ನು ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆಸಿದ್ದಾರೆ.

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮಯಾಂಕ್ ಅನ್‌ಸೋಲ್ಡ್‌ ಆಗಿದ್ದರು. ಆರ್‌ಸಿಬಿ ಸೇರಿದಂತೆ ಯಾವುದೇ ತಂಡಗಳು ಕನ್ನಡಿಗನನ್ನು ಖರೀದಿ ಮಾಡಲಿಲ್ಲ.

ಪ್ರತಿಭಾವಂತ ಆಟಗಾರನಿಗೆ ಐಪಿಎಲ್‌ ಆಡುವ ಅವಕಾಶ ಸಿಗಲಿಲ್ಲ. ಆದರೆ, ದೇಶೀಯ ಕ್ರಿಕೆಟ್‌ನಲ್ಲಿ ಅವರು ಅಬ್ಬರಿಸುವುದು ಮುಂದುವರೆಸಿದ್ದಾರೆ.

ಐಪಿಎಲ್‌ನಲ್ಲಿ ಮಯಾಂಕ್‌ ಆರ್‌ಸಿಬಿ, ಡೆಲ್ಲಿ, ಪಂಜಾಬ್‌ ಕಿಂಗ್ಸ್‌ ಪರ ಆಡಿದ್ದರು. ಕಳೆದ ಆವೃತ್ತಿಯಲ್ಲಿ ಎಸ್‌ಆರ್‌ಚ್‌ ಪರ ಬ್ಯಾಟ್‌ ಬೀಸಿದ್ದರು. 

26 ಎಸೆತಗಳಲ್ಲಿ ಪಂದ್ಯ ಗೆದ್ದ ಭಾರತ ತಂಡ

Photos: ICC/BCCI