ಆರ್‌ಸಿಬಿ ತಂಡದ ಐವರು ಯಶಸ್ವಿ ನಾಯಕರಿವರು

By Jayaraj
Dec 17, 2024

Hindustan Times
Kannada

ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ತಂಡ ಇದುವರೆಗೂ ಕಪ್‌ ಗೆದ್ದಿಲ್ಲ. ಮುಂದಿನ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ವಿಶ್ವಾಸದಲ್ಲಿದೆ.

ಆರ್‌ಸಿಬಿ ತಂಡವನ್ನು ಕಳೆದ 17 ಆವೃತ್ತಿಗಳಲ್ಲಿ ಹಲವರು ನಾಯಕರಾಗಿ ಮುನ್ನಡೆಸಿದ್ದಾರೆ. ಅವರಲ್ಲಿ ತಂಡದ ಯಶಸ್ವಿ ನಾಯಕರು ಯಾರು ಎಂದು ನೋಡೋಣ.

ಕೆವಿನ್ ಪೀಟರ್ಸನ್ ನಾಯಕತ್ವದಲ್ಲಿ ತಂಡ ಕೇವಲ 2 ಪಂದ್ಯಗಳಲ್ಲಿ ಗೆದ್ದರೆ, ನಾಲ್ಕರಲ್ಲಿ ಸೋತಿದೆ. ಗೆಲುವಿನ ಪ್ರಮಾಣ 33.33 ಶೇ.

ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕನಾಗಿ 66 ಪಂದ್ಯಗಳಲ್ಲು ಗೆಲುವು ಕಂಡಿದ್ದಾರೆ. 77ರಲ್ಲಿ ತಂಡ ಸೋತಿದೆ.ಗೆಲುವಿನ ಪ್ರಮಾಣ 48.95 ಶೇ.

ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ 21 ಗೆಲುವುಗಳು ಹಾಗೂ 21ರಲ್ಲಿ ಸೋಲು ಕಂಡಿದೆ. ಇವರ ಗೆಲುವಿನ ಪ್ರಮಾಣ 50.50 ಶೇ.

ಡೇನಿಯಲ್ ವೆಟ್ಟೋರಿ ನಾಯಕತ್ವದಲ್ಲಿ 15 ಗೆಲುವು ಹಾಗೂ 13 ಸೋಲು ಎದುರಾಗಿದೆ. ಗೆಲುವಿನ ಶೇಕಡಾವಾರು ಪ್ರಮಾಣ 53.27.

BCCI

ಅನಿಲ್ ಕುಂಬ್ಳೆ ಆರ್‌ಸಿಬಿಯ ಅತ್ಯಂತ ಯಶಸ್ವಿ ನಾಯಕ. ಇವರ ನಾಯಕತ್ವದಲ್ಲಿ ತಂಡ 19 ಪಂದ್ಯಗಳಲ್ಲಿ ಗೆದ್ದರೆ, 16ರಲ್ಲಿ ಸೋತಿದೆ. ಗೆಲುವಿ ಪ್ರಮಾಣ 54.28 ಶೇಕಡಾ.

ಬಾಲಿವುಡ್‌ ನಟಿ ರವೀನಾ ಟಂಡನ್‌ ಮಸ್ತ್‌ ಮಸ್ತ್‌ ಫೋಟೋಗಳು