ಭಾರತ vs ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಸಾಧ್ಯವೇ?

By Prasanna Kumar P N
Jan 14, 2025

Hindustan Times
Kannada

ಭಾರತ vs ಪಾಕಿಸ್ತಾನ ನಡುವಿನ ಪಂದ್ಯ ಎಷ್ಟು ರೋಚಕವಾಗಿರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಉಭಯ ತಂಡಗಳ ಕಾದಾಟವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುತ್ತದೆ.

ರೋಚಕ ಕಾದಾಟ

ಆದರೆ, ಎರಡು ತಂಡಗಳು ಏಷ್ಯಾಕಪ್ ಮತ್ತು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಭಾರತ-ಪಾಕಿಸ್ತಾನ ನಡುವೆ ಕೊನೆಯದಾಗಿ 2012ರಲ್ಲಿ ದ್ವಿಪಕ್ಷೀಯ ಸರಣಿ ನಡೆದಿತ್ತು.

ಏಷ್ಯಾಕಪ್, ಐಸಿಸಿ

13 ವರ್ಷಗಳ ಹಿಂದೆ ಇಂಡೋ-ಪಾಕ್ ನಡುವೆ ಸರಣಿ ನಡೆದಿತ್ತು. ಆ ಬಳಿಕ ಉಭಯ ದೇಶಗಳ ನಡುವಿನ ರಾಜಕೀಯ ಸಂಘರ್ಷದ ಕಾರಣ ಎರಡು ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆಗೊಂಡಿಲ್ಲ.

ದ್ವಿಪಕ್ಷೀಯ ಸರಣಿ

ಅಂದಿನಿಂದ ಕ್ರೀಡೆ, ರಾಜಕೀಯ.. ಹೀಗೆ ಎಲ್ಲಾ ವಿಚಾರಗಳಲ್ಲೂ ಸಂಪರ್ಕ ಕಟ್ ಆಯಿತು. ಎರಡು ದೇಶಗಳು ಪರಸ್ಪರ ಪ್ರವಾಸ ಕೈಗೊಳ್ಳುವುದಕ್ಕೂ ಬ್ರೇಕ್ ಹಾಕಲಾಯಿತು.

ಸಂಪರ್ಕ ಕಡಿತ

ಆದರೆ ಮುಂದಿನ ದಿನಗಳಲ್ಲಿ ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜಿಸಲು ಸಾಧ್ಯವೇ? ಇದಕ್ಕೆ ಉತ್ತರ ಏನೆಂದರೆ ಸಾಧ್ಯ.

ಸಾಧ್ಯವೇ?

ಉಭಯ ತಂಡಗಳ ದ್ವಿಪಕ್ಷೀಯ ಸರಣಿ ಆಯೋಜಿಸಲು ಸಾಧ್ಯವಿದೆ. ಅದಕ್ಕೆ ಉಭಯ ದೇಶಗಳ ಸರ್ಕಾರಗಳು ಪರಸ್ಪರ ಮಾತುಕತೆ ನಡೆಸಿ ಈ ಹಿಂದಿನ ಒಪ್ಪಂದ ರದ್ದು ಮಾಡಬೇಕು.

ಒಪ್ಪಂದ ರದ್ದು ಮಾಡಬೇಕು

ಇದು ಸಾಧ್ಯವಾಗಬೇಕೆಂದರೆ ಉಭಯ ದೇಶಗಳ ನಡುವೆ ಬಾಂಧವ್ಯ ವೃದ್ಧಿಯಾಗಬೇಕು. ಸರ್ಕಾರಗಳು ಪರಸ್ಪರ ಅನುಮತಿ ನೀಡಿದರೆ ದ್ವಿಪಕ್ಷೀಯ ಸರಣಿ ಆಯೋಜಿಸಲು ಸಾಧ್ಯವಾಗುತ್ತದೆ.

ಅನುಮತಿ ಮುಖ್ಯ

ಒಂದು ವೇಳೆ ಸರ್ಕಾರಗಳು ಒಪ್ಪಿಗೆ ನೀಡದಿದ್ದರೂ ಮತ್ತೊಂದು ಅವಕಾಶ ಇದೆ. ಭಾರತ-ಪಾಕಿಸ್ತಾನ ದೇಶಗಳು ಹೊರತುಪಡಿಸಿ ಯುನೈಟೆಡ್ ಅರಬ್ ಎಮಿರೇಟ್ಸ್​​ನಲ್ಲಿ ಸರಣಿ ಆಯೋಜಿಸಬಹುದು.

UAEನಲ್ಲಿ ಸರಣಿ ಆಯೊಜನೆ?

ಅಲ್ಲದೆ, ಬೇರೆ ಕ್ರಿಕೆಟ್ ಮಂಡಳಿಗಳು ಇಂಡೋ-ಪಾಕ್ ನಡುವೆ ದ್ವಿಪಕ್ಷೀಯ ಸರಣಿ ಆಯೋಜಿಸಲು ಆಸಕ್ತಿ ತೋರಿವೆ. ಇದಕ್ಕೆ ಪಿಸಿಬಿ ಒಪ್ಪಿದರೂ, ಬಿಸಿಸಿಐ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪಿಸಿಬಿ ಒಪ್ಪಿಗೆ?

ಇಲ್ಲಿದೆ ಅತ್ಯುತ್ತಮ ಕನ್ನಡ ರೋಮ್ಯಾಂಟಿಕ್ ಸಿನಿಮಾಗಳ ಪಟ್ಟಿ