RR ವಿರುದ್ಧ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌ LSG ವಿರುದ್ಧ ಗೋಲ್ಡನ್‌ ಡಕ್‌

By Jayaraj
Mar 27, 2025

Hindustan Times
Kannada

ಐಪಿಎಲ್‌ ಮಾತ್ರವಲ್ಲದೆ ಟಿ20 ಪಂದ್ಯಗಳೇ ಹಾಗೆ. ಒಮ್ಮೆ ಅಬ್ಬರಿಸಿದ ಆಟಗಾರ ಮತ್ತೊಮ್ಮೆ ಸೊನ್ನೆ ಸುತ್ತಬಹುದು. ಇಂದು ಫಾರ್ಮ್‌ನಲ್ಲಿಲ್ಲದ ಆಟಗಾರ ಮತ್ತೊಮ್ಮೆ ಸಿಡಿಯಬಹುದು.

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ತಂಡದ ಆಟಗಾರ ಇಶಾನ್‌ ಕಿಶನ್‌ ಅಮೋಘ ಶತಕ ಬಾರಿಸಿದ್ದರು.

ಕೇವಲ 47 ಎಸೆತಗಳಲ್ಲಿ 106 ರನ್‌ ಗಳಿಸುವ ಮೂಲಕ, ಚೊಚ್ಚಲ ಐಪಿಎಲ್‌ ಶತಕ ಬಾರಿಸಿದರು.

ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಪದಾರ್ಪಣೆ ಪಂದ್ಯದಲ್ಲೇ ಶತಕ ಬಂದಿತ್ತು.

ಆದರೆ, ಟೂರ್ನಿಯ ಎರಡನೇ ಪಂದ್ಯದಲ್ಲಿ ಕಿಶನ್‌ ನಿರಾಶೆ ಮೂಡಿಸಿದ್ದಾರೆ.

ಇಂದು (ಮಾ.27) ಹೈದರಾಬಾದ್‌ನಲ್ಲಿ ಎಸ್‌ಆರ್‌ಎಚ್‌ ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಎದುರಿಸುತ್ತಿದೆ.

ಸನ್‌ರೈಸರ್ಸ್‌ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಕಿಶನ್‌, ಮೊದಲ ಎಸೆತದಲ್ಲೇ ಔಟಾಗಿ, ಗೋಲ್ಡನ್‌ ಡಕ್‌ ಆದರು.

ಶಾರ್ದುಲ್ ಠಾಕೂರ್ ಅವರ ಎಸೆತಕ್ಕೆ ಇಶಾನ್‌ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ಗೆ ಕ್ಯಾಚ್‌ ನೀಡಿ ಔಟಾಗಿದ್ದಾರೆ.

ಒಂದೇ ಓವರ್‌ನಲ್ಲಿ ಶಾರ್ದುಲ್‌ ಸತತ ಎರಡು ವಿಕೆಟ್‌ ಪಡೆದರು. ಇನ್ನಿಂಗ್ಸ್‌ನ 3ನೇ ಓವರ್‌ನ ಮೊದಲ ಎಸೆತದಲ್ಲಿ ಅಭಿಷೇಕ್‌, 2ನೇ ಎಸೆತದಲ್ಲಿ ಕಿಶನ್‌ ವಿಕೆಟ್‌ ಎಗರಿಸಿದರು.

ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ರಜತ್‌ ಪಾಟೀದಾರ್‌