ಭಾರತೀಯರ ಮನಗೆದ್ದ ಪ್ಯಾಟ್ ಕಮಿನ್ಸ್; ಯಾಕೆ?

By Prasanna Kumar P N
Jan 05, 2025

Hindustan Times
Kannada

ಬಾರ್ಡರ್​ ಗವಾಸ್ಕರ್​ ಟ್ರೋಫಿ ಸೋತ ಬಳಿಕ ವಿರಾಟ್ ಕೊಹ್ಲಿ ನಿವೃತ್ತಿ ಆಗುತ್ತಾರೆ ಎಂಬ ವದಂತಿ ಹಬ್ಬಿದೆ. ಇದು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತದ ವಿರುದ್ಧ 5ನೇ ಟೆಸ್ಟ್ ಜಯಿಸಿ ಆಸ್ಟ್ರೇಲಿಯಾ 1-3 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

ಈ ಸರಣಿಯಲ್ಲಿ ಕೊಹ್ಲಿ ವೈಫಲ್ಯ ಅನುಭವಿಸಿದ ಕಾರಣ ನಿವೃತ್ತಿ ಪಡೆಯುತ್ತಾರೆ ಎಂಬ ಊಹಾಪೋಹ ಸುದ್ದಿ ವೈರಲ್ ಆಗಿದೆ.

ಕೊಹ್ಲಿ ನಿವೃತ್ತಿ ವದಂತಿಗೆ ಸಂಬಂಧಿಸಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಪ್ರತಿಕ್ರಿಯಿಸಿ, ಬೇಸರ ವ್ಯಕ್ತಪಡಿಸಿದ್ದಾರೆ.

ವಿರಾಟ್ ವಿರುದ್ಧ ಆಡುವುದನ್ನು ಹೆಚ್ಚು ಆನಂದಿಸುತ್ತೇನೆ. ಅವರೊಬ್ಬ ಶ್ರೇಷ್ಠ ಪ್ರತಿಸ್ಪರ್ಧಿ ಎಂದು ಕಮಿನ್ಸ್ ಬಣ್ಣಿಸಿದ್ದಾರೆ.

ಸಿಡ್ನಿ ಟೆಸ್ಟ್ ಅವರ ಕೊನೆಯ ಪಂದ್ಯವಾಗಿದ್ದರೆ ನಿಜವಾಗಲೂ ದುಃಖಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಾತು ಭಾರತೀಯರ ಮನ ಗೆದ್ದಿದೆ.

ಕೊಹ್ಲಿ ಕಳೆದ ದಶಕದಿಂದ ಸ್ಟಾರ್ ಬ್ಯಾಟರ್​ ಆಗಿದ್ದಾರೆ. ಅವರನ್ನು ಔಟ್ ಮಾಡಿದರೆ, ಪಂದ್ಯ ಗೆಲ್ಲಲು ಸಾಕಷ್ಟು ನೆರವಾಗುತ್ತದೆ. ಅಂತಹ ಆಟಗಾರ ನಿವೃತ್ತಿ ಪಡೆಯುವುದು ನಿಜಕ್ಕೂ ಬೇಸರ ಎಂದಿದ್ದಾರೆ.

ಕೊಹ್ಲಿ ಗಳಿಸಿದ ರನ್‌ಗಿಂತ ಹೆಚ್ಚಾಗಿ ಆಟಕ್ಕೆ ಸ್ವಲ್ಪ ನಾಟಕೀಯತೆ ತರುತ್ತಾರೆ. ಅದು ಕೆಲವೊಮ್ಮೆ ಒಳ್ಳೆಯದು ಮತ್ತು ಕೆಲವೊಮ್ಮೆ ಕೆಟ್ಟದ್ದು ಎಂದು ಹೇಳಿದ್ದಾರೆ.

ಪ್ರತಿಸ್ಪರ್ಧಿ ಆಟಗಾರನ ನಿವೃತ್ತಿ ವದಂತಿಗೆ ಬೇಸರ ವ್ಯಕ್ತಪಡಿಸಿದ್ದಕ್ಕೆ ಅಭಿಮಾನಿಗಳು, ಕಮಿನ್ಸ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾತ್‌ಟಬ್‌ನಲ್ಲಿ ಕೂತು ಬೋಲ್ಡ್‌ ಪೋಸ್‌ ನೀಡಿದ ಲಕ್ಷ್ಮೀ ನಿವಾಸ ಸೀರಿಯಲ್‌ ಭಾವನಾ