ಟ್ರಾವಿಸ್ ಹೆಡ್​ರನ್ನ ಡಕೌಟ್ ಮಾಡಿ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

By Prasanna Kumar P N
Dec 26, 2024

Hindustan Times
Kannada

ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರು ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್​​ನ ಮೊದಲ ದಿನದಂದು 3 ವಿಕೆಟ್ ಪಡೆದ ಬುಮ್ರಾ ಈ ಬೃಹತ್ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿದ್ದಾರೆ.

ಪದಾರ್ಪಣೆ ಮಾಡಿದ ಸ್ಯಾಮ್ ಕಾನ್ಟ್ಸಾಸ್ ಅವ​ರಿಂದ ರನ್ ಹೊಡೆಸಿಕೊಂಡ ಬುಮ್ರಾ, ನಂತರ ಬಲಿಷ್ಠವಾಗಿ ಕಂಬ್ಯಾಕ್ ಮಾಡಿ ಪ್ರಮುಖ ಮೂರು ವಿಕೆಟ್ ಕಿತ್ತರು.

ಆಸ್ಟ್ರೇಲಿಯಾದ ಉಸ್ಮಾನ್ ಖವಾಜ (57), ಟ್ರಾವಿಸ್ ಹೆಡ್ (0) ಮತ್ತು ಮಿಚೆಲ್ ಮಾರ್ಷ್ (4) ಅವರು ಬೂಮ್ರಾ ಬೌಲಿಂಗ್​ನಲ್ಲಿ ಔಟಾದರು.

ಆದರೆ, ಭಾರತಕ್ಕೆ ಸತತವಾಗಿ ಕಾಡಿದ್ದ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ವಿಶೇಷ ದಾಖಲೆಯೊಂದಕ್ಕೆ ಸಾಕ್ಷಿಯಾದರು.

ಕಳೆದ ಎರಡು ಪಂದ್ಯಗಳಲ್ಲಿ ಸತತ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ ಈ ಪಂದ್ಯದಲ್ಲಿ 7 ಎಸೆತಗಳಲ್ಲಿ ಡಕೌಟ್​ ಆಗಿ ಹೊರ ನಡೆದರು. ಅವರು ಕ್ಲೀನ್ ಬೋಲ್ಡ್ ಆದರು.

ಈ ಮೂಲಕ ಜಸ್ಪ್ರೀತ್ ಬುಮ್ರಾ, ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಟ್ರಾವಿಸ್ ಹೆಡ್​ರನ್ನು ಡಕ್​ ಔಟ್ ಮಾಡಿದ ಭಾರತದ ಮೊದಲ ಬೌಲರ್ ಎಂಬ ದಾಖಲೆಗೆ ಪಾತ್ರರಾದರು.

ಬುಮ್ರಾ ಹೊರತುಪಡಿಸಿ ಟೀಮ್ ಇಂಡಿಯಾದ ಯಾವೊಬ್ಬ ಬೌಲರ್​ ಸಹ ಟ್ರಾವಿಸ್ ಹೆಡ್ ಅವರನ್ನು ಡಕೌಟ್​ ಮಾಡಿಲ್ಲ.

ಬಿಗ್‌ಬಾಸ್‌ ಕನ್ನಡದಲ್ಲಿ ಈ ಬಾರಿ ಮೋಕ್ಷಿತಾ ಪೈ ಟ್ರೋಫಿ ಗೆಲ್ಲಬಹುದೇ?