ಇಂಗ್ಲೆಂಡ್ ವಿರುದ್ಧದ ಏಕದಿನ-ಟಿ20ಐ ಸರಣಿಯಿಂದ ಬುಮ್ರಾ ಔಟ್?
By Prasanna Kumar P N
Jan 07, 2025
Hindustan Times
Kannada
ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರ ಫ್ಯಾನ್ಸ್ಗೆ ಕೆಟ್ಟ ಸುದ್ದಿಯೊಂದು ಸಿಕ್ಕಿದೆ.
ತವರಿನಲ್ಲಿ ಇಂಗ್ಲೆಂಡ್ ವಿರುದ್ದದ ವೈಟ್ಬಾಲ್ ಸರಣಿಯಿಂದ ಬುಮ್ರಾ ಅವರನ್ನು ಹೊರಗಿಡಲು ಬಿಸಿಸಿಐ ಚಿಂತಿಸಿದೆ ಎಂದು ವರದಿಯಾಗಿದೆ.
ಬಿಜಿಟಿಯಲ್ಲಿ ಭಾರತ ಸೋತರೂ 32 ವಿಕೆಟ್ ಕಿತ್ತು ಮಿಂಚಿದ ಬುಮ್ರಾ, ಕೊನೆಯ ಟೆಸ್ಟ್ನಲ್ಲಿ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದರು.
ಬೆನ್ನು ನೋವು ಕಾರಣ ಬುಮ್ರಾ 5ನೇ ಟೆಸ್ಟ್‌ನ ಕೊನೆಯ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡಲಿಲ್ಲ. ಸಿರೀಸ್ನಲ್ಲಿ 150ಕ್ಕೂ ಹೆಚ್ಚು ಓವರ್ ಹಾಕಿದ್ದರು.
ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಭಾರತಕ್ಕೆ ಬುಮ್ರಾ ಅನಿವಾರ್ಯ. ಹೀಗಾಗಿ ಕೆಲಸದ ಹೊರೆ ತಗ್ಗಿಸುವ ಸಲುವಾಗಿ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತಿಸಿದೆ.
ಬುಮ್ರಾ ಚೇತರಿಸಿಕೊಳ್ಳಲೆಂದು ಬಿಸಿಸಿಐ ವೈದ್ಯಕೀಯ ತಂಡ ಶ್ರಮಿಸುತ್ತಿದೆ. ಪ್ರಸ್ತುತ ಅವರ ಗಾಯದ ತೀವ್ರತೆಯ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.
ಒಂದು ವೇಳೆ ಬುಮ್ರಾ ಗಾಯವು ಗ್ರೇಡ್-1 ವಿಭಾಗದಲ್ಲಿದ್ದರೆ, ಅವರಿಗೆ ಕನಿಷ್ಠ ಎರಡರಿಂದ ಮೂರು ವಾರಗಳ ಪುನರ್ವಸತಿ ಅಗತ್ಯವಿದೆ.
ಗ್ರೇಡ್-2 ಗಾಯವಾಗಿದ್ದರೆ ಚೇತರಿಕೆಗೆ 6 ವಾರಗಳ ಕಾಲ, ಗ್ರೇಡ್-3 ಆಗಿದ್ದರೆ ಕನಿಷ್ಠ 3 ತಿಂಗಳ ವಿಶ್ರಾಂತಿ ಮತ್ತು ಪುನರ್ವಸತಿ ಅಗತ್ಯವಿದೆ ಎಂದು ವರದಿ ತಿಳಿಸಿದೆ.
ಹೀಗಾಗಿ, ಇಂಗ್ಲೆಂಡ್ ವಿರುದ್ಧದ ಏಕದಿನ, ಟಿ20ಐ ಸರಣಿಗೆ ಬುಮ್ರಾ ಆಯ್ಕೆ ಮಾಡದಿರಲು ಬಿಸಿಸಿಐ ಚಿಂತಿಸಿದೆ. ಜನವರಿ 22ರಿಂದ ಟಿ20 ಸರಣಿ, ಫೆಬ್ರವರಿ 6ರಿಂದ ಏಕದಿನ ಸರಣಿ ನಡೆಯಲಿದೆ.
ಭಾರತದ 5ನೇ ಶ್ರೀಮಂತ ಕ್ರಿಕೆಟಿಗ ಸೆಹ್ವಾಗ್; ಎಷ್ಟು ಕೋಟಿ ಒಡೆಯ ವೀರು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ