ಮುಂಬೈ ಪಂದ್ಯ ವೀಕ್ಷಿಸಲು ಬಂದ ಜೂನಿಯರ್‌ ಬುಮ್ರಾ

By Jayaraj
May 07, 2024

Hindustan Times
Kannada

ಎಸ್‌ಆರ್‌ಎಚ್‌ ಹಾಗೂ ಮುಂಬೈ ಇಂಡಿಯನ್ಸ್‌ ಪಂದ್ಯ ವೀಕ್ಷಿಸಲು ಮೈದಾನಕ್ಕೆ ವಿಶೇಷ ಅತಿಥಿ ಬಂದಿದ್ದರು.

ಎಂಐ ವೇಗಿ ಜಸ್ಪ್ರೀತ್‌ ಬುಮ್ರಾ ಅವರ ಮಗ ತಾಯಿಯೊಂದಿಗೆ ಕುಳಿತು ಪಂದ್ಯ ವೀಕ್ಷಿಸಿದ್ದಾನೆ.

ಸೋಮವಾರ ನಡೆದ ಪಂದ್ಯವನ್ನು ನೋಡಲು ಬುಮ್ರಾ ಪತ್ನಿ ಸಂಜನಾ ಗಣೇಶನ್‌ ವಾಂಖೆಡೆ ಕ್ರೀಡಾಂಗಣಕ್ಕೆ ಬಂದಿದ್ದರು.

ಅವರೊಂದಿಗೆ ಪುತ್ರ ಅಂಗದ್‌ ಕೂಡಾ ಮಡಿಲಲ್ಲಿ ಕುಳಿತು ಪಂದ್ಯ ವೀಕ್ಷಿಸಿದ್ದಾನೆ.

ಜೂನಿಯರ್‌ ಬುಮ್ರಾ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ವಿಶೇಷವೆಂದರೆ ಅಂಗದ್‌ ಕೂಡಾ ಮುಂಬೈ ಇಂಡಿಯನ್ಸ್‌ ಜೆರ್ಸಿ ಧರಿಸಿಕೊಂಡು ಪಂದ್ಯ ವೀಕ್ಷಿಸಿದ್ದಾನೆ.

2023ರ ಸೆಪ್ಟೆಂಬರ್‌ 4ರಂದು ಅಂಗದ್‌ ಜನಿಸಿದ್ದಾನೆ. ಈ ಜೋಡಿಗೆ 2021ರ ಮಾರ್ಚ್‌ ತಿಂಗಳಲ್ಲಿ ವಿವಾಹವಾಗಿತ್ತು.

ಸೋಮವಾರ ಬುಮ್ರಾ ಪತ್ನಿ ಸಂಜನಾ ಅವರ ಬರ್ತ್‌ಡೇ ಕೂಡಾ ಆಗಿತ್ತು

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna