ವಿಜಯ್‌ ಹಜಾರೆ ಟ್ರೋಫಿ;‌ ಫೈನಲ್‌ನಲ್ಲಿ ಸೋತೇ ಇಲ್ಲ ಕರ್ನಾಟಕ

By Jayaraj
Jan 18, 2025

Hindustan Times
Kannada

ಇಂದು (ಜ.18) ವಿಜಯ್‌ ಹಜಾರೆ ಟ್ರೋಫಿ ಫೈನಲ್‌ ಪಂದ್ಯ ನಡೆಯುತ್ತಿದೆ.

ನಿರ್ಣಾಯಕ ಮುಖಾಮುಖಿಯಲ್ಲಿ ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕವು, ಕರುಣ್‌ ನಾಯರ್‌ ನೇತೃತ್ವದ ವಿದರ್ಭ ತಂಡವನ್ನು ಎದುರಿಸುತ್ತಿದೆ.

ಕರ್ನಾಟಕ ತಂಡ ದಾಖಲೆಯ ಐದನೇ ಫೈನಲ್‌ ಆಡಲು ಸಜ್ಜಾಗಿದ್ದರೆ, ವಿದರ್ಭ ತಂಡ ಕನ್ನಡಿಗನ ಸಾರಥ್ಯದಲ್ಲಿ ಮೊದಲ ಫೈನಲ್‌ ಆಡುತ್ತಿದೆ.

ಕರ್ನಾಟಕ ತಂಡವು ಈ ಹಿಂದೆ ನಾಲ್ಕು ಬಾರಿ ಫೈನಲ್‌ ಪ್ರವೇಶಿಸಿತ್ತು.

ಫೈನಲ್‌ ಆಡಿದ ಎಲ್ಲಾ ನಾಲ್ಕು ಬಾರಿಯೂ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಕೊನೆಯ ಬಾರಿಗೆ 2019-20ರಲ್ಲಿ ಫೈನಲ್‌ ಪ್ರವೇಶಿಸಿದ್ದ ಕರ್ನಾಟಕ, ತಮಿಳುನಾಡು ಮಣಿಸಿ ಚಾಂಪಿಯನ್‌ ಆಗಿತ್ತು.

2017-18ರಲ್ಲಿ ಸೌರಾಷ್ಟ್ರ ಮಣಿಸಿದರೆ, 2014-15ರಲ್ಲಿ ಪಂಜಾಬ್‌ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದಿತ್ತು.

2013-14ರಲ್ಲಿ ಚೊಚ್ಚಲ ವಿಜಯ್‌ ಹಜಾರೆ ಟ್ರೋಫಿ ಗೆದ್ದ ಸಾಧನೆ ಮಾಡಿತು.

Photo: Instagram

ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು

Flickr