ರಣಜಿ ಪಂದ್ಯದಲ್ಲಿ 26 ರನ್ ಗಳಿಸಿ ಔಟಾದ ಕೆಎಲ್‌ ರಾಹುಲ್

By Jayaraj
Jan 30, 2025

Hindustan Times
Kannada

ರಣಜಿ ಟ್ರೋಫಿ ಪುನರಾಗಮನ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ನಿರಾಶೆ ಮೂಡಿಸಿದ್ದಾರೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಕರ್ನಾಟಕ ಮತ್ತು ಹರಿಯಾಣ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲು ಬ್ಯಾಟಿಂಗ್‌ ನಡೆಸುತ್ತಿದೆ.

ಪಂದ್ಯದಲ್ಲಿ ಕೆಎಲ್ ರಾಹುಲ್ 37 ಎಸೆತಗಳಲ್ಲಿ ಕೇವಲ 26 ರನ್ ಗಳಿಸಿ ಔಟಾದರು.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ರಾಹುಲ್, ನಾಯಕ ಮಯಾಂಕ್ ಅಗರ್ವಾಲ್ ಜತೆಗೆ ಎರಡನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟವಾಡಿದರು.

26 ರನ್‌ ಗಳಿಸಿದ್ದಾಗ ವೇಗಿ ಅನ್ಶುಲ್ ಕಾಂಬೋಜ್ ಬೌಲಿಂಗ್‌ನಲ್ಲಿ ಔಟಾದರು.

2020ರ ನಂತರ ಕೆಎಲ್‌ ರಾಹುಲ್‌ ಮೊದಲ ರಣಜಿ ಪಂದ್ಯ ಆಡುತ್ತಿದ್ದರೆ. ಕೊನೆಯ ಬಾರಿಗೆ ಬಂಗಾಳ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಆಡಿದ್ದರು.

ಮೊಣಕೈ ಗಾಯದಿಂದಾಗಿ ಪಂಜಾಬ್ ವಿರುದ್ಧದ ಕೊನೆಯ ರಣಜಿ ಟ್ರೋಫಿ ಪಂದ್ಯದಿಂದ ರಾಹುಲ್ ಹೊರಗುಳಿದರು.

X and BCCI

ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು

Flickr