ಗಂಭೀರ್ ಕೋಚ್ ಆದ್ಮೇಲೆ ಭಾರತ ಸೋತ ಸರಣಿಗಳಿವು!
By Prasanna Kumar P N
Jan 05, 2025
Hindustan Times
Kannada
ರಾಹುಲ್ ದ್ರಾವಿಡ್ ಬಳಿಕ ಹೆಡ್ ಕೋಚ್ ಸ್ಥಾನವನ್ನು ತುಂಬಿದ ಗೌತಮ್ ಗಂಭೀರ್ ಮೇಲೆ ಅಪಾರ ನಿರೀಕ್ಷೆಗಳಿದ್ದವು.
ಗಂಭೀರ್ ಕೋಚ್ ಆದರೆ, ಭಾರತದ ಗೆಲುವಿನ ನಾಗಾಲೋಟ ಮುಂದುವರೆಯಲಿದೆ ಎಂಬುದು ಆಶಾಭಾವನೆಯಾಗಿತ್ತು.
ಆದರೆ, ಅದೆಲ್ಲಾ ಹುಸಿಯಾಗಿದೆ. ಕಳೆದ ಆರು ತಿಂಗಳಲ್ಲೇ ಭಾರತ ತಂಡ ಪ್ರಮುಖ ಸರಣಿಗಳನ್ನು ಸೋಲಿಗೆ ಶರಣಾಗಿದೆ.
ಆರು ತಿಂಗಳಲ್ಲಿ ಮೂರು ಸರಣಿಗಳನ್ನು ಸೋತಿರುವ ಭಾರತದ ಕಳಪೆ ಪ್ರದರ್ಶನಕ್ಕೆ ಗಂಭೀರ್ರನ್ನು ಪ್ರಶ್ನಿಸುವಂತೆ ಮಾಡಿದೆ.
ಜುಲೈನಲ್ಲಿ ಅಧಿಕಾರಕ್ಕೇರಿದ ಗಂಭೀರ್ ಮಾರ್ಗದರ್ಶನದ ಅಡಿ ಶ್ರೀಲಂಕಾ ವಿರುದ್ಧ ಭಾರತ 0-2 ರಿಂದ ಏಕದಿನ ಸರಣಿ ಸೋತಿತ್ತು.
27 ವರ್ಷಗಳ ಬಳಿಕ ಭಾರತ ತಂಡವು ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಕಳೆದುಕೊಂಡು ಕೆಟ್ಟ ದಾಖಲೆ ಬರೆಯಿತು.
ನ್ಯೂಜಿಲೆಂಡ್ ವಿರುದ್ಧ ಭಾರತ 0-3 ಅಂತರದಲ್ಲಿ ಟೆಸ್ಟ್ ವೈಟ್ವಾಶ್ ಆಗಿತ್ತು. ಕಿವೀಸ್ ಭಾರತದಲ್ಲಿ ಗೆದ್ದ ಚೊಚ್ಚಲ ಟೆಸ್ಟ್ ಸರಣಿ ಇದಾಗಿದೆ.
ಇದೀಗ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು 1-3 ಅಂತರದಿಂದ ಸೋತಿದೆ. 10 ವರ್ಷಗಳ ನಂತರ ಭಾರತ, ಆಸೀಸ್ ವಿರುದ್ಧ ಟೆಸ್ಟ್ ಸರಣಿ ಸೋತಿದೆ.
ಈ ಮೂರು ಸರಣಿಗಳ ಜೊತೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಲೂ ಭಾರತ ತಂಡ ವಿಫಲವಾಯಿತು.
ಇದು ಗಂಭೀರ್ ಅವರ ಅಡಿಯಲ್ಲಿ ಭಾರತ ಹೆಚ್ಚು ಯಶಸ್ಸು ಗಳಿಸಲಿಲ್ಲ ಎಂಬುದಕ್ಕೆ ಸಾಕ್ಷಿ.
26 ಎಸೆತಗಳಲ್ಲಿ ಪಂದ್ಯ ಗೆದ್ದ ಭಾರತ ತಂಡ
Photos: ICC/BCCI
ಮುಂದಿನ ಸ್ಟೋರಿ ಕ್ಲಿಕ್ ಮಾಡಿ