ಐಪಿಎಲ್‌ನಲ್ಲಿ ಸತತವಾಗಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳು
By Jayaraj
May 06, 2025
Hindustan Times
Kannada
ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಈವರೆಗೆ ಸತತ 6 ಪಂದ್ಯಗಳಲ್ಲಿ ಗೆದ್ದಿದೆ.
ಇದೇ ವೇಳೆ ಐಪಿಎಲ್ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳ ಕುರಿತು ತಿಳಿಯೋಣ.
ಮುಂಬೈ ಇಂಡಿಯನ್ಸ್ ತಂಡವು 3 ಬಾರಿ ಸತತ 6 ಪಂದ್ಯಗಳಲ್ಲಿ ಗೆದ್ದಿದೆ. ಇದಕ್ಕೂ ಹಿಂದೆ 2017 ಹಾಗೂ 2008ರಲ್ಲಿ ಗೆದ್ದಿತ್ತು.
ಮುಂಬೈ ಇಂಡಿಯನ್ಸ್
2008ರಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು 2018ರಲ್ಲಿ ಎಸ್‌ಆರ್‌ಎಚ್ ತಂಡಗಳು ಸತತ 6 ಪಂದ್ಯ ಗೆದ್ದಿದ್ದವು.
ಆರ್‌ಆರ್, ಎಸ್‌ಆರ್‌ಎಚ್
ಆರ್‌ಸಿಬಿ ತಂಡವು 2011ರಲ್ಲಿ ಸತತ 7 ಪಂದ್ಯಗಳಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು.
ಆರ್‌ಸಿಬಿ
ಸಿಎಸ್‌ಕೆ ತಂಡ 2013ರಲ್ಲಿ ಸತತ 7 ಪಂದ್ಯಗಳನ್ನು ಗೆದ್ದಿತ್ತು. ಅದೇ ವರ್ಷ ಫೈನಲ್‌ನಲ್ಲಿ ಮುಂಬೈ ವಿರುದ್ಧ ಸೋಲು ಕಂಡಿತು.
ಸಿಎಸ್‌ಕೆ
2013ರಿಂದ 2014ರವರೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಸತತ 8 ಪಂದ್ಯಗಳನ್ನು ಗೆದ್ದು ಬೀಗಿತ್ತು.
ಪಂಜಾಬ್
ಕೆಕೆಆರ್ ತಂಡವು 2014ರಲ್ಲಿ ಸತತ 9 ಪಂದ್ಯಗಳಲ್ಲಿ ಗೆದ್ದು ಐಪಿಎಲ್ ಟ್ರೋಫಿ ಗೆದ್ದಿತು. 2015ರಲ್ಲಿ ಮತ್ತೊಂದು ಪಂದ್ಯ ಗೆದ್ದು ಸತತ 10ರಲ್ಲಿ ಗೆದ್ದ ಸಾಧನೆ ಮಾಡಿತು.
ಕೆಕೆಆರ್
PTI
ಮಾವಿನ ಸಿಪ್ಪೆಯ ಅದ್ಭುತ ಪ್ರಯೋಜನಗಳು ಇಲ್ಲಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ