ಏಕದಿನ ಕ್ರಿಕೆಟ್‌: ಓವರ್​​ನಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟ ಭಾರತದ ಬೌಲರ್ಸ್

By Prasanna Kumar P N
Feb 06, 2025

Hindustan Times
Kannada

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವೇಗಿ ಹರ್ಷಿತ್ ರಾಣಾ ಓವರ್​ವೊಂದರಲ್ಲಿ ಅತ್ಯಧಿಕ ರನ್ ಬಿಟ್ಟು ಕೆಟ್ಟ ದಾಖಲೆಗೆ ಒಳಗಾಗಿದ್ದಾರೆ.

ಹರ್ಷಿತ್ ಎಸೆದ 6ನೇ ಓವರ್​ನಲ್ಲಿ ಫಿಲ್ ಸಾಲ್ಟ್ 3 ಸಿಕ್ಸರ್, 2 ಬೌಂಡರಿ ಸಹಿತ 26 ರನ್ ಚಚ್ಚಿದರು. ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ನಾಲ್ವರೊಂದಿಗೆ ಜಂಟಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಹಾಗಾದರೆ ಏಕದಿನದಲ್ಲಿ ಓವರ್​ವೊಂದರಲ್ಲಿ ಅತಿ ಹೆಚ್ಚು ರನ್ ನೀಡಿರುವ ಭಾರತದ ಬೌಲರ್​ಗಳು ಯಾರು ಎಂಬುದನ್ನು ಈ ಮುಂದೆ ನೋಡೋಣ.

ಇಶಾಂತ್ ಶರ್ಮಾ: 2013ರ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 30 ರನ್ ಬಿಟ್ಟುಕೊಟ್ಟಿದ್ದರು.

ಯುವರಾಜ್ ಸಿಂಗ್: 2007ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ 30 ರನ್‌ ನೀಡಿದ್ದರು.

ಕೃನಾಲ್ ಪಾಂಡ್ಯ: 2021ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ 28 ರನ್‌ ಬಿಟ್ಟುಕೊಟ್ಟಿದ್ದರು.

ದಿನೇಶ್ ಮೊಂಗಿಯಾ: 2007 ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನದಲ್ಲಿ 26 ರನ್ ಬಿಟ್ಟುಕೊಟ್ಟಿದ್ದರು.

ಆರ್‌ಪಿ ಸಿಂಗ್: 2008 ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ 26 ರನ್‌ ದಂಡಿಸಿಕೊಂಡಿದ್ದರು.

Pic: NDTV

ವಿಕ್ರಮ್ ರಾಜ್​ ವೀರ್​ ಸಿಂಗ್: 2006 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ 26 ರನ್‌ ಚಚ್ಚಿಸಿಕೊಂಡಿದ್ದರು.

PIC: DNA India

ಹರ್ಷಿತ್ ರಾಣಾ: 2025 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನದಲ್ಲಿ 26 ರನ್ ನೀಡಿದ್ದಾರೆ.

ಮೂಳೆ ಕ್ಯಾನ್ಸರ್‌ನ ಲಕ್ಷಣಗಳು, ಕಾರಣಗಳು ಇಲ್ಲಿವೆ

image credit to unsplash