Enter text Here

ಡೆತ್​ ಓವರ್​ಗಳಲ್ಲಿ ಹೆಚ್ಚು ರನ್; ಟಿಮ್ ಡೇವಿಡ್ ದಾಖಲೆ

By Prasanna Kumar PN
Apr 10, 2025

Hindustan Times
Kannada

2022ರ ಐಪಿಎಲ್​ನಿಂದ ಇಲ್ಲಿಯ ತನಕ ಡೆತ್​ ಓವರ್​ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆರ್​ಸಿಬಿ ಸ್ಟಾರ್ ಬ್ಯಾಟರ್ ಟಿಮ್ ಡೇವಿಡ್ ಅಗ್ರಸ್ಥಾನಕ್ಕೇರಿದ್ದಾರೆ.

2025ರ ಐಪಿಎಲ್​ನ ಗುಂಪು ಹಂತದ 24ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 20 ಎಸೆತಗಳಲ್ಲಿ 2 ಬೌಂಡರಿ, 4 ಬೌಂಡರಿ ಸಹಿತ ಅಜೇಯ 37 ರನ್ ಸಿಡಿಸಿ ಈ ದಾಖಲೆ ಬರೆದರು.

ಇದರೊಂದಿಗೆ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಅವರನ್ನು ಹಿಂದಿಕ್ಕಿದ್ದಾರೆ. 2022ರಿಂದ ಡೆತ್ ಓವರ್​ಗಳಲ್ಲಿ ಅಂದರೆ 16-20 ಓವರ್​ಗಳ ನಡುವೆ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿ ಇಂತಿದೆ.

630 ರನ್ - ಟಿಮ್ ಡೇವಿಡ್ (ಸ್ಟ್ರೈಕ್​ರೇಟ್ - 195.04)

609 ರನ್ - ಶಿಮ್ರಾನ್ ಹೆಟ್ಮೆಯರ್ (ಸ್ಟ್ರೈಕ್​ರೇಟ್ - 177.03)

607 ರನ್ - ದಿನೇಶ್ ಕಾರ್ತಿಕ್ (ಸ್ಟ್ರೈಕ್​ರೇಟ್ - 195.17)

585 ರನ್ - ನಿಕೋಲಸ್ ಪೂರನ್ (ಸ್ಟ್ರೈಕ್​ರೇಟ್ - 180.55)

ಎಲ್ಲವನ್ನು ಎದುರಿಸಿ ಗೆಲ್ಲುತ್ತೀರಿ; ಮೇ 1ರ ಗುರುವಾರದ ದಿನ ಭವಿಷ್ಯ