ಒಂದೇ ತಂಡದ ಪರ ಹೆಚ್ಚು ಸಿಕ್ಸರ್; ಕೊಹ್ಲಿ ದಾಖಲೆ
By Prasanna Kumar PN
May 03, 2025
Hindustan Times
Kannada
ಐಪಿಎಲ್ನ 52ನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಲವು ದಾಖಲೆ ನಿರ್ಮಿಸಿದ್ದಾರೆ.
ಈ ಪೈಕಿ ಒಂದೇ ತಂಡದ ಪರ ಅತ್ಯಧಿಕ ಸಿಕ್ಸರ್ ಸಿಡಿಸಿದ ದಾಖಲೆಯೂ ಒಂದು. 33 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ 62 ರನ್ ಗಳಿಸಿ ಔಟಾದರು.
ಈ ಪಂದ್ಯದಲ್ಲಿ ಒಂದು ಸಿಕ್ಸರ್ ಬಾರಿಸುವ ಮೂಲಕ ಆರ್ಸಿಬಿ ಪರ 300 ಸಿಕ್ಸರ್ಗಳನ್ನು ಪೂರೈಸಿದರು. ಇದೀಗ ಇದೇ ತಂಡದ ಪರ 304 ಸಿಕ್ಸರ್ ಬಾರಿಸಿದ್ದಾರೆ.
ಹಾಗಾದರೆ ಒಂದೇ ತಂಡದ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು ಯಾರು? ಇಲ್ಲಿದೆ ವಿವರ
304 ಸಿಕ್ಸರ್ - ವಿರಾಟ್ ಕೊಹ್ಲಿ (ಆರ್ಸಿಬಿ)
263 ಸಿಕ್ಸರ್ - ಕ್ರಿಸ್ ಗೇಲ್ (ಆರ್ಸಿಬಿ)
262 ಸಿಕ್ಸರ್ - ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್)
258 - ಕಿರನ್ ಪೊಲಾರ್ಡ್ (ಮುಂಬೈ ಇಂಡಿಯನ್ಸ್)
257 - ಎಂಎಸ್ ಧೋನಿ (ಚೆನ್ನೈ ಸೂಪರ್ ಕಿಂಗ್ಸ್)
ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ