ನಾಯಕನಾಗಿ ಇತಿಹಾಸ ನಿರ್ಮಿಸಿದ ಎಂಎಸ್ ಧೋನಿ
By Jayaraj
Apr 11, 2025
Hindustan Times
Kannada
2 ವರ್ಷಗಳ ಬಳಿಕ ಎಂಎಸ್ ಧೋನಿ ಮತ್ತೆ ನಾಯಕನಾಗಿ ಕಣಕ್ಕಿಳಿದಿದ್ದಾರೆ
ಐಪಿಎಲ್‌ನಲ್ಲಿ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಗಾಯದಿಂದ ಹೊರಬಿದ್ದ ಬಳಿಕ, ಧೋನಿ ಮತ್ತೊಮ್ಮೆ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಾಯಕನಾಗಿ ಮೈದಾನಕ್ಕಿಳಿಯುವ ಮೂಲಕ ಮಾಹಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್ ಇತಿಹಾಸದ ಅತ್ಯಂತ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.
42 ವರ್ಷ ತುಂಬಿದ ನಂತರ ತಂಡವೊಂದನ್ನು ಮುನ್ನಡೆಸಿದ ಮೊದಲ ನಾಯಕ ಎಂಬ ದಾಖಲೆ ಧೋನಿ ಹೆಸರಲ್ಲಿದೆ.
ಈ ಹಿಂದೆ ಆಡಂ ಗಿಲ್‌ಕ್ರಿಸ್ಟ್ ಮತ್ತು ಶೇನ್ ವಾರ್ನ್ ತಮ್ಮ 41ನೇ ಹುಟ್ಟುಹಬ್ಬದ ನಂತರ ಐಪಿಎಲ್ ತಂಡವನ್ನು ಮುನ್ನಡೆಸಿದ್ದರು
ರಾಹುಲ್ ದ್ರಾವಿಡ್ 40 ವರ್ಷ ದಾಟಿದ ಮೇಲೆ ಐಪಿಎಲ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.
ಧೋನಿ ಒಬ್ಬರೇ 43 ವರ್ಷ ದಾಟಿದ ನಂತರ (43 ವರ್ಷ 278 ದಿನ) ಐಪಿಎಲ್ ತಂಡವೊಂದರ ನಾಯಕನಾಗಿ ಆಡುತ್ತಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಟ್ರೋಫಿ (5) ಗೆದ್ದಿರುವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಧೋನಿ, ಇದೀಗ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
ANI/PTI
ವಿರಾಟ್ ಕೊಹ್ಲಿ ಮತ್ತೊಂದು ವಿಶ್ವದಾಖಲೆ, ಏನದು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ