ಈ ಸಲ ಮುಂಬೈ ಇಂಡಿಯನ್ಸ್ ಚಾಂಪಿಯನ್‌ ಆಗಲ್ಲ ಎನ್ನುತ್ತಿದೆ ಇತಿಹಾಸ 

By Jayaraj
May 27, 2025

Hindustan Times
Kannada

5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು ಈ ಬಾರಿಯೂ ಪ್ಲೇ ಆಫ್‌ಗೆ ಪ್ರವೇಶಿಸಿದೆ.

ತಂಡವು ಲೀಗ್‌ ಹಂತದ ಬಳಿಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, ಎಲಿಮನೇಟರ್‌ ಪಂದ್ಯದಲ್ಲಿ ಆಡಲಿದೆ.

ಅಗ್ರ ಎರಡು ಸ್ಥಾನ ಪಡೆದು ಕ್ವಾಲಿಫೈಯರ್‌ 1ರಲ್ಲಿ ಆಡುವ ಅವಕಾಶವನ್ನು ಮುಂಬೈ ಕೈಚೆಲ್ಲಿದೆ.

ಇಲ್ಲೊಂದು ಆಸಕ್ತಿದಾಯಕ ಮಾಹಿತಿ ಇದೆ. ಈ ಬಾರಿ ಮುಂಬೈ ಇಂಡಿಯನ್ಸ್‌ ಆರನೇ ಬಾರಿಗೆ ಚಾಂಪಿಯನ್‌ ಆಗುವುದು ಕಷ್ಟ ಎನ್ನಲಾಗಿದೆ.

ಇದಕ್ಕೆ ಕಾರಣವೂ ಇದೆ. ಈ ಹಿಂದೆ, ಐಪಿಎಲ್‌ ಅಂಕಪಟ್ಟಿಯಲ್ಲಿ 3 ಅಥವಾ 4ನೇ ಸ್ಥಾನ ಪಡೆದ ನಂತರ, ಎಂಐ ತಂಡ ಐಪಿಎಲ್ ಟ್ರೋಫಿಯನ್ನೇ ಗೆದ್ದಿಲ್ಲ.

ಇದು ಅಚ್ಚರಿಯಾದರೂ ಸತ್ಯ. ತಂಡವು 5 ಬಾರಿ ಚಾಂಪಿಯನ್‌ ಆದ ಸಮಯದಲ್ಲಿಯೂ ಅಂಕಪಟ್ಟಿಯಲ್ಲಿ ಮೊದಲ ಅಥವಾ ಎರಡನೇ ಸ್ಥಾನ ಪಡೆದಿತ್ತು.

ಮೊದಲ ಅಥವಾ ಎರಡನೇ ಸ್ಥಾನ ಪಡೆದಾಗ ಆಡಿದ 6 ಆವೃತ್ತಿಗಳಲ್ಲಿ 5 ಬಾರಿ ಕಪ್‌ ಗೆದ್ದಿದೆ.

ಈ ಬಾರಿ ಟಾಪ್‌ 2 ಫಿನಿಶ್‌ ತಂಡದಿಂದ ಸಾಧ್ಯವಾಗಿಲ್ಲ. ಹೀಗಾಗಿ ಫಲಿತಾಂಶ ಕುತೂಹಲಕಾರಿಯಾಗಿರಲಿದೆ.

All Photos: PTI

ಆರೆಂಜ್‌ ಬಣ್ಣದ ಲಂಗ ದಾವಣಿಯಲ್ಲಿ ಆಶಿಕಾ ರಂಗನಾಥ್‌ ಮಿಂಚು