ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಿತೀಶ್ ಕುಮಾರ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು.
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತದ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.
ನಿತೀಶ್ ರೆಡ್ಡಿ ಆಂಧ್ರಪ್ರದೇಶದ ವಿಶಾಖಪಟ್ಟಣದವರು. ಐದು ವರ್ಷದವರಾಗಿದ್ದಾಗಲೇ ಕ್ರಿಕೆಟ್ ತರಬೇತಿ ಆರಂಭಿಸಿದರು.
ನಿತೀಶ್ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ಬಿ.ಟೆಕ್ ಪೂರ್ಣಗೊಳಿಸಿದ್ದಾರೆ. ಇದೇ ವೇಳೆ ಬ್ಯುಸಿನೆಸ್ ಅನಾಲಿಟಿಕ್ಸ್‌ನಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದಾರೆ.
ನಿತೀಶ್ ಕುಮಾರ್ ರೆಡ್ಡಿ ಅವರ ನಿವ್ವಳ ಮೌಲ್ಯವು 8ರಿಂದ 15 ಕೋಟಿ ರೂ. ಎಂದು ಅಂದಾಜಿಸಾಲಗಿದೆ.
ಐಪಿಎಲ್ 2025ರಲ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ ಪರ ಆಡಲಿದ್ದಾರೆ. ಅವರನ್ನು ತಂಡವು 6 ಕೋಟಿ ರೂ.ಗೆ ಉಳಿಸಿಕೊಂಡಿದೆ.
ನಿತೀಶ್ ಭಾರತದ ಪರ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರನ್ನು ಬಿಸಿಸಿಐ ಕೇಂದ್ರೀಯ ಒಪ್ಪಂದದಲ್ಲಿ ಸೇರಿಸಲಾಗಿದೆ. ಸಿ-ಗ್ರೇಡ್‌ಗೆ ಸೇರ್ಪಡೆಗೊಂಡ ಅವರು 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ನಿತೀಶ್ ರೆಡ್ಡಿಗೆ ಬೈಕ್‌ಗಳೆಂದರೆ ಇಷ್ಟ. ಅವರಲ್ಲಿ BMW G 310 GS ಮತ್ತು Jawa 42 ಬೈಕ್ ಇವೆ. ಇದರ ಬೆಲ್ಲೆ ಕ್ರಮವಾಗಿ 3.86 ಮತ್ತು 2.32 ಲಕ್ಷ ರೂ.