ಚೊಚ್ಚಲ ಟಿ20 ವಿಶ್ವಕಪ್ ಆಡಲಿರುವ ಭಾರತೀಯ ಕ್ರಿಕೆಟಿಗರು ಇವರೇ
By Prasanna Kumar P N Apr 30, 2024
Hindustan Times Kannada
ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟವಾಗಿದೆ. ರೋಹಿತ್ ಶರ್ಮಾ ನಾಯಕ, ಹಾರ್ದಿಕ್ ಪಾಂಡ್ಯ ಉಪನಾಯಕನಾಗಿದ್ದಾರೆ.
ಕೆಲ ಆಟಗಾರರು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಅವರು ಯಾರೆಂದು ನೋಡೋಣ.
ಯಶಸ್ವಿ ಜೈಸ್ವಾಲ್: ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಜೈಸ್ವಾಲ್, ರೋಹಿತ್ಗೆ ಜೊತೆಗಾರನಾಗಲಿದ್ದಾರೆ. ಇದು ಅವರಿಗೆ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿ.
ಶಿವಂ ದುಬೆ: ಭಾರತದ ಪರ 21 ಟಿ20 ಪಂದ್ಯಗಳನ್ನಾಡಿರುವ ಶಿವಂ ದುಬೆ, ಐಪಿಎಲ್ನಲ್ಲಿ ಸಿಎಸ್ಕೆ ಪರ ಅಬ್ಬರಿಸುತ್ತಿದ್ದಾರೆ. ಅದ್ಭುತ ಫಿನಿಷರ್ ಆಗಿ ಹೊರಹೊಮ್ಮಿದ್ದಾರೆ.
ಸಂಜು ಸ್ಯಾಮ್ಸನ್: ಆಗೊಮ್ಮೆ ಈಗೊಮ್ಮೆ ಭಾರತ ತಂಡಕ್ಕೆ ಆಯ್ಕೆಯಾಗುತ್ತಿದ್ದ ಸಂಜು, ಈಗ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ. ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಾರಣ ವಿಶ್ವಕಪ್ಗೆ ಆಯ್ಕೆಯಾಗಿದ್ದಾರೆ.
ಕುಲ್ದೀಪ್ ಯಾದವ್: ಏಕದಿನ ವಿಶ್ವಕಪ್ನಲ್ಲಿ ಮಿಂಚಿನ ಬೌಲಿಂಗ್ ನಡೆಸಿದ್ದ ಕುಲ್ದೀಪ್, ಮೊದಲ ಬಾರಿಗೆ ಆಯ್ಕೆಯಾದ ಟಿ20 ವಿಶ್ವಕಪ್ನಲ್ಲೂ ಅದೇ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಐಪಿಎಲ್ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ಮೊಹಮ್ಮದ್ ಸಿರಾಜ್: ವೇಗಿ ಸಿರಾಜ್ಗೂ ಮೊದಲ ಟಿ20 ವಿಶ್ವಕಪ್ ಆಗಿದೆ. ಕಳೆದ ಏಕದಿನ ವಿಶ್ವಕಪ್ ಆಡಿದ್ದ ಸಿರಾಜ್, ಪ್ರಸ್ತುತ ಐಪಿಎಲ್ನಲ್ಲಿ ಮಿಂಚಿನ ಬೌಲಿಂಗ್ ನಡೆಸುತ್ತಿಲ್ಲ. ಇದರ ನಡುವೆಯೂ ಅವಕಾಶ ಪಡೆದು ಗಮನ ಸೆಳೆದಿದ್ದಾರೆ.
ಚಾಣಕ್ಯ ನೀತಿ: ಇಂಥ ಪುರುಷರನ್ನು ಮಹಿಳೆಯರು ಬೇಗ ಇಷ್ಟಪಡ್ತಾರೆ