ODI World Cup 2023: ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ರನ್ ಸಿಡಿಸಿದ ಸಕ್ರಿಯ ಆಟಗಾರರು; ಕೊಹ್ಲಿಯೇ ಟಾಪ್
By Prasanna Kumar P N Aug 13, 2023
Hindustan Times Kannada
ಏಕದಿನ ವಿಶ್ವಕಪ್ಗೆ ದಿನಗಣನೆ ಆರಂಭವಾಗಿದೆ. ಮೆಗಾ ಟೂರ್ನಿಯಲ್ಲಿ ಯಾರು ಹೆಚ್ಚು ರನ್ ಗಳಿಸುತ್ತಾರೆ ಎಂಬ ಚರ್ಚೆ ಜೋರಾಗಿದೆ.
ಹಿರಿಯರಿಗೆ ಪೈಪೋಟಿ ನೀಡಲು ಯುವ ಆಟಗಾರರು ಸಜ್ಜಾಗಿದ್ದಾರೆ. ತಮ್ಮ ಸಾಮರ್ಥ್ಯ ನಿರೂಪಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಆದರೆ ಸಕ್ರಿಯ ಆಟಗಾರರ ಪೈಕಿ ಏಕದಿನ ವಿಶ್ವಕಪ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರು ಯಾರು ಅನ್ನೋದನ್ನು ಈ ಮುಂದೆ ನೋಡೋಣ.
ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ರನ್ ಗಳಿಸಿದ ಸಕ್ರಿಯ ಆಟಗಾರರಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 3 ವಿಶ್ವಕಪ್ (2011, 2015, 2019) ಆಡಿರುವ ಕೊಹ್ಲಿ, 26 ಇನ್ನಿಂಗ್ಸ್‌ಗಳಲ್ಲಿ 46.81ರ ಸರಾಸರಿಯಲ್ಲಿ 1,030 ರನ್ ಸಿಡಿಸಿದ್ದಾರೆ. 6 ಶತಕ, 6 ಅರ್ಧಶತಕ ಸಿಡಿಸಿದ್ದಾರೆ.
ಅನುಭವಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 2 ವಿಶ್ವಕಪ್‌ಗಳಲ್ಲಿ (2015, 2019) ಆಡಿದ್ದಾರೆ. ವಾರ್ನರ್ 18 ಪಂದ್ಯಗಳನ್ನು ಕಣಕ್ಕಿಳಿದಿದ್ದು, 62ರ ಬ್ಯಾಟಿಂಗ್ ಸರಾಸರಿಯಲ್ಲಿ 4 ಶತಕ, 3 ಅರ್ಧಶತಕ ಚಚ್ಚಿದ್ದಾರೆ. 2019ರಲ್ಲಿ 10 ಇನ್ನಿಂಗ್ಸ್‌ಗಳಲ್ಲಿ 647 ರನ್ ಗಳಿಸಿದ್ದರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರರ್ (648) ಆಗಿದ್ದರು. ಶರ್ಮಾ 2 ವಿಶ್ವಕಪ್ ಆಡಿದ್ದಾರೆ. ಬಲಗೈ ಆಟಗಾರ 17 ಪಂದ್ಯಗಳಲ್ಲಿ 6 ಶತಕ ಮತ್ತು 3 ಅರ್ಧಶತಕಗಳು, 65.20ರ ಬ್ಯಾಟಿಂಗ್ ಸರಾಸರಿಯಲ್ಲಿ 978 ರನ್ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ.
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಏಕದಿನ ವಿಶ್ವಕಪ್‌ಗಳಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಕಳೆದ ವಿಶ್ವಕಪ್‌ನಲ್ಲಿ 578 ರನ್ ಸಿಡಿಸಿದ್ದ ಕೇನ್, 22 ಇನ್ನಿಂಗ್ಸ್‌ಗಳಲ್ಲಿ 2 ಶತಕ ಮತ್ತು 3 ಅರ್ಧಶತಕ ಹಾಗೂ 56.93ರ ಬ್ಯಾಟಿಂಗ್ ಸರಾಸರಿಯಿಂದ 911 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮೂರು (2011, 2015, 2019) ವಿಶ್ವಕಪ್ಗಳನ್ನು ಆಡಿದ್ದಾರೆ. 20 ಇನ್ನಿಂಗ್ಸ್‌ಗಳಲ್ಲಿ 46.33ರ ಬ್ಯಾಟಿಂಗ್ ಒಂದು ಶತಕ ಮತ್ತು 5 ಅರ್ಧಶತಕಗಳ ಸಹಾಯದಿಂದ 834 ರನ್ ಸಿಡಿಸಿದ್ದಾರೆ.
ಪುಷ್ಪ 2 ಸಿನಿಮಾದ ಕಿಸ್ಸಿಕ್ ಹಾಡಿಗೆ 2 ಕೋಟಿ ಸಂಭಾವನೆ ಪಡೆದ್ರ ಶ್ರೀಲೀಲಾ