ಟಿ20 ಕ್ರಿಕೆಟ್‌ನಲ್ಲಿ ರಶೀದ್ ಖಾನ್ ಐತಿಹಾಸಿಕ ಸಾಧನೆ

By Jayaraj
Jun 25, 2024

Hindustan Times
Kannada

ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್, ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ವಿಶೇಷ ಸಾಧನೆ ಮಾಡಿದ್ದಾರೆ.

ಚುಟುಕು ಸ್ವರೂಪದಲ್ಲಿ ಅತಿ ಹೆಚ್ಚು ಬಾರಿ ನಾಲ್ಕು ವಿಕೆಟ್ ಗೊಂಚಲು ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟಿ20 ವಿಶ್ವಕಪ್ 2024ರ ಸೂಪರ್ ಎಂಟರ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ರಶೀದ ಈ ಸಾಧನೆ ಮಾಡಿದ್ದಾರೆ.

ಪಂದ್ಯದಲ್ಲಿ ಅಫ್ಘಾನಿಸ್ತಾನದ ಎಂಟು ರನ್‌ ಅಂತರದಿಂದ ರೋಚಕ ಗೆಲುವು ಸಾಧಿಸಿತು.

25 ವರ್ಷದ ಸ್ಪಿನ್ನರ್ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಒಂಬತ್ತು ಬಾರಿ ನಾಲ್ಕು ವಿಕೆಟ್‌ ಗೊಂಚಲು ಪಡೆದಿದ್ದಾರೆ.

ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಪುರುಷರ ಟಿ20ಯಲ್ಲಿ ಎಂಟು ಬಾರಿ ನಾಲ್ಕು ವಿಕೆಟ್ ಸಾಧನೆ ಮಾಡಿದ್ದಾರೆ.

ಉಗಾಂಡಾದ ಹೆನ್ರಿ ಸೆನ್ಯೊಂಡೊ ಏಳು ಬಾರಿ ನಾಲ್ಕು ವಿಕೆಟ್ ಸಾಧನೆಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಸಮೋಸಾದಿಂದ ಚಿಕನ್‌ ವಿಂಗ್ಸ್‌ವರೆಗೆ; ವೀಕೆಂಡ್‌ ಪಾರ್ಟಿಗೆ ಹೇಳಿ ಮಾಡಿಸಿದ ಸ್ನ್ಯಾಕ್ಸ್‌ಗಳು