ವಿಶ್ವಕಪ್ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾಕ್ಕೆ ಭಾರಿ ಹೊಡೆತ

By Prasanna Kumar P N
May 31, 2024

Hindustan Times
Kannada

ಜೂನ್ 1 ರಿಂದ ಪ್ರಾರಂಭವಾಗುವ ಬಹುನಿರೀಕ್ಷಿತ ಟಿ20 ವಿಶ್ವಕಪ್ 2024 ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ತಂಡ ಸಂಕಷ್ಟಕ್ಕೆ ಸಿಲುಕಿದೆ.

ಆಸ್ಟ್ರೇಲಿಯಾ ತಂಡದ ನಾಯಕ‌ ಮಿಚೆಲ್ ಮಾರ್ಷ್ ಅವರು ಮಂಡಿರಜ್ಜು ಗಾಯದಿಂದ (ಹ್ಯಾಮ್ ಸ್ಟ್ರಿಂಗ್ ಇಂಜುರಿ) ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.

ಆಸ್ಟ್ರೇಲಿಯಾದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರು ನಾಯಕನ ಗಾಯದ ಚೇತರಿಕೆಗೆ ಸಂಬಂಧಿಸಿದ ಬೆಳವಣಿಗೆ ದೃಢಪಡಿಸಿದ್ದಾರೆ.

ಮಾರ್ಷ್ ಖಂಡಿತವಾಗಿಯೂ ಮೊದಲ ಪಂದ್ಯವನ್ನು ಆಡುತ್ತಾರೆ. ಆದರೆ ಬೌಲಿಂಗ್‌ ಮಾಡುವುದಿಲ್ಲ ಎಂದು ಖಚಿತಪಡಿಸಿದ್ದಾರೆ. 

ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯದಲ್ಲಿ ಜೂನ್ 6 ರಂದು ಓಮನ್ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಆಡಲಿದೆ.

ಐಪಿಎಲ್​ನಲ್ಲಿ ಮಿಚೆಲ್‌ ಮಾರ್ಷ್ ಅವರು ಡೆಲ್ಲಿ ಕ್ಯಾಪಿಟಲ್ ಪರ‌ ಕೆಲವೇ ಪಂದ್ಯಗಳಲ್ಲಿ ಕಣಕ್ಕಿಳಿದು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರು.

ಅತಿಯಾದ ಜಾಮೂನ್ ತಿನ್ನುವುದರಿಂದ ಆಗುವ 7 ಆರೋಗ್ಯ ಸಮಸ್ಯೆಗಳಿವು