ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್, ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ವೈಯಕ್ತಿಕ ವಿಚಾರಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ.
ಹೀಗಾಗಿ, ಅವರ ವೈಯಕ್ತಿಕ ವಿಚಾರದ ಕುರಿತು ಕ್ರಿಕೆಟ್ ಫ್ಯಾನ್ಸ್ಗೆ ತಿಳಿದಿರುವುದು ಅಪರೂಪ. ಮೈದಾನದಲ್ಲಿ ಬಹಳ ಕೋಪಿಷ್ಠನಾಗುವ ಶಕೀಬ್ ಆಗಿರೋದು ಲವ್ ಮ್ಯಾರೇಜ್.
ಹೌದು, ನಿಮಗೆ ಅಚ್ಚರಿ ಎನಿಸಿದರೂ ಇದೇ ಸತ್ಯ. ಅದು ಕೂಡ ಸಪ್ತ ಸಾಗರದಾಚೆ. ಪ್ರೀತಿಯಲ್ಲಿ ಬಿದ್ದದ್ದು ಬಾಂಗ್ಲಾದೇಶದಲ್ಲಿ ಅಲ್ಲ, ಇಂಗ್ಲೆಂಡ್ನಲ್ಲಿ ಎಂಬುದು ಗಮನಾರ್ಹ ಸಂಗತಿ.
ಶಕೀಬ್ ಪತ್ನಿ ಹೆಸರು ಉಮ್ಮಿ ಅಹಮದ್ ಶಿಶಿರ್. ಅವರು ಮಾಡೆಲ್ ಆಗಿದ್ದರು. ಇವರಿಬ್ಬರ ಪ್ರೇಮಕಥೆ ಶುರುವಾಗಿದ್ದು 2010ರಲ್ಲಿ. ಮದುವೆಯಾಗಿದ್ದು 2012ರಲ್ಲಿ.
2010ರಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಆಡಿದ ಮೊದಲ ಬಾಂಗ್ಲಾದೇಶದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಕೀಬ್, ನಂತರ ವೋರ್ಸೆಸ್ಟರ್‌ಶೈರ್ ತಂಡದೊಂದಿಗೆ ಕಣಕ್ಕಿಳಿದಿದ್ದರು.
ಅಂದು ಶಿಶಿರ್ ಕೂಡ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್ನಲ್ಲಿ ನೆಲೆಸಿದ್ದರು. ಇಬ್ಬರೂ ಮೊದಲು ಭೇಟಿಯಾದದ್ದು ಹೋಟೆಲ್ ಒಂದರಲ್ಲಿ. ಆರಂಭದಲ್ಲಿ ಉತ್ತಮ ಸ್ನೇಹಿತರಾಗಿದ್ದರು.
ಆರಂಭದಲ್ಲಿ ಸ್ನೇಹಿತರಾಗಿದ್ದರೂ ನಂತರ ಪರಸ್ಪರ ಪ್ರೀತಿಯಲ್ಲಿ ಬಿದ್ದರು. ನಂತರ ಒಟ್ಟಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ಇಲ್ಲಿಂದ ಅವರ ಪ್ರೀತಿ ಮತ್ತಷ್ಟು ಪ್ರೀತಿ ಪ್ರಸಿದ್ದಿಯಾಯಿತು.
ಸುಮಾರು 2 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ದಂಪತಿ 2012ರಲ್ಲಿ ವಿವಾಹವಾದರು. ಶಿಶಿರ್ ಬಾಲಾ ಸುಂದರ ಮತ್ತು ಮನಮೋಹಕ. ಆಕೆ ನಿಜವಾಗಿಯೂ ಅಪ್ಸರೆಗಿಂತ ಕಡಿಮೆಯಿಲ್ಲ.