ಅತಿ ಹೆಚ್ಚು ಬಾರಿ ರನೌಟ್‌ ಆದ ಕ್ರಿಕೆಟಿಗರಿವರು

By Jayaraj
Mar 06, 2024

Hindustan Times
Kannada

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಬಾರಿ ರನೌಟ್‌ ಆದ ಕಳಪೆ ದಾಖಲೆ ಭಾರತದ ಮಾಜಿ ಆಟಗಾರನ ಹೆಸರಲ್ಲಿದೆ.

ಅತಿ ಹೆಚ್ಚು ಬಾರಿ ರನೌಟ್‌ ಆದ ದಾಖಲೆ ರಾಹುಲ್‌ ದ್ರಾವಿಡ್‌ ಹೆಸರಲ್ಲಿದೆ.

ಟೀಮ್‌ ಇಂಡಿಯಾದ ಹಾಲಿ ಕೋಚ್‌ ದ್ರಾವಿಡ್‌ ಒಟ್ಟು 53 ಬಾರಿ ರನೌಟ್‌ ಆಗಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 40 ಹಾಗೂ ಟೆಸ್ಟ್‌ನಲ್ಲಿ 13 ಬಾರಿ ದ್ರಾವಿಡ್‌ ರನೌಟ್ ಆಗಿದ್ದಾರೆ.‌

ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ 51 ಬಾರಿ ರನೌಟ್‌ ಆಗಿದ್ದಾರೆ.

ಜಯವರ್ಧನೆ ಏಕದಿನದಲ್ಲಿ 39 ಬಾರಿ, ಟೆಸ್ಟ್‌ನಲ್ಲಿ 7 ಬಾರಿ ಹಾಗೂ 5 ಬಾರಿ ಟಿ20 ಕ್ರಿಕೆಟ್‌ನಲ್ಲಿ ರನೌಟ್‌ ಆಗಿದ್ದಾರೆ.

ಲಂಕಾದ ಮತ್ತೋರ್ವ ಮಾಜಿ ಆಟಗಾರ ಮಾರ್ವನ್‌ ಅಟಾಪಟ್ಟು 48 ಬಾರಿ ರನೌಟ್‌ ಆಗಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ 47 ಬಾರಿ ರನೌಟ್‌ ಆಗಿದ್ದಾರೆ. ಏಕದಿನದಲ್ಲಿ 31, ಟೆಸ್ಟ್‌ನಲ್ಲಿ 15 ಬಾರಿ ಔಟಾಗಿದ್ದಾರೆ.

ಬಿಸಿಲು ಹೆಚ್ಚಾಯ್ತು ಅಂತ ಐಸ್‌ಕ್ರೀಂ ತಿನ್ನುವ ಮೊದಲು ಈ ವಿಷಯ ತಿಳ್ಕೊಳಿ