ಆರ್‌ಸಿಬಿ ಮ್ಯಾಚ್ ನೋಡಲು ಬೆಂಗಳೂರಿಗೆ ಬಂದ್ರಾ? ಚಿನ್ನಸ್ವಾಮಿ ಸ್ಟೇಡಿಯಂಗೆ ಹತ್ತಿರದ ಈ ಮಾಲ್‌ಗಳನ್ನೂ ನೋಡಿ
By Reshma May 18, 2024
Hindustan Times Kannada
ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಮ್ಯಾಚ್ ನಡೆಯುತ್ತಿದೆ. ಈ ಹೈವೋಲ್ಟೇಜ್ ಪಂದ್ಯ ನೋಡಲು ವಿವಿಧ ರಾಜ್ಯ, ಜಿಲ್ಲೆಗಳಿಂದ ಹಲವರು ಬೆಂಗಳೂರಿಗೆ ಬಂದಿದ್ದಾರೆ.
ನೀವು ಆರ್‌ಸಿಬಿ ಮ್ಯಾಚ್ ನೋಡಲು ಸಿಲಿಕಾನ್ ಸಿಟಿಗೆ ಬಂದಿದ್ದರೆ ಚಿನ್ನಸ್ವಾಮಿ ಕ್ರೀಡಾಂಗಣದ ಹತ್ತಿರದ ಈ ಮಾಲ್‌ಗಳನ್ನೂ ನೋಡಿ ಬನ್ನಿ.
ಯುಬಿ ಸಿಟಿ ಮಾಲ್: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಹಳ ಹತ್ತಿರವಿರುವ ಬೆಂಗಳೂರಿನ ಪ್ರಸಿದ್ಧ ಮಾಲ್‌ಗಳಲ್ಲಿ ಇದು ಒಂದಾಗಿದೆ.
ಗರುಡ ಮಾಲ್: ಅಶೋಕನಗರದಲ್ಲಿರುವ ಗರುಡಾ ಮಾಲ್ ಎಂಜಿ ರಸ್ತೆಗೆ ಸಮೀಪದಲ್ಲಿದೆ. ಇದು ಕೂಡ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹತ್ತಿರದಲ್ಲೇ ಇದೆ.
1 ಎಂಜಿ ಮಾಲ್: ಹಲಸೂರಿನಲ್ಲಿರುವ 1 ಎಂಜಿ ಮಾಲ್ ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸಮೀಪದಲ್ಲಿದೆ. ಕಬ್ಬನ್‌ಪಾರ್ಕ್‌ನಿಂದ ಟ್ರಿನಿಟಿವರೆಗೆ ಮೆಟ್ರೊದಲ್ಲಿ ಬಂದರೆ ಕಾಲ್ನಡಿಗೆ ದೂರದಲ್ಲಿದೆ ಈ ಮಾಲ್.
ಲಿಡೋ ಮಾಲ್: 1 ಎಂಜಿ ಮಾಲ್‌ಗೆ ತಾಗಿಕೊಂಡಂತೆ ಇದೆ ಲಿಡೋ ಮಾಲ್.
Pinterest
ಸಿಗ್ಮಾ ಮಾಲ್: ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಸಿಗ್ಮಾ ಮಾಲ್ ಕೂಡ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಮೀಪದಲ್ಲಿದೆ.
ಸೆಂಟ್ರಲ್ ಮಾಲ್: ಗರುಡಾ ಮಾಲ್‌ನಿಂದ ಕೂಗಳತೆ ದೂರದಲ್ಲಿದೆ ಸೆಂಟ್ರಲ್ ಮಾಲ್. ಎಂಜಿ ರಸ್ತೆಯಿಂದ ಟ್ರಿನಿಟಿ ಕಡೆಗೆ ಹೋಗುವಾಗ ಮಧ್ಯದಲ್ಲಿ ಸೆಂಟ್ರಲ್ ಮಾಲ್ ಇದೆ.
ಬ್ರಿಗೇಡ್ ರೋಡ್‌ನಲ್ಲಿದೆ ಇವಾ ಮಾಲ್. ಇದು ಕೂಡ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹತ್ತಿರದಲ್ಲಿದೆ.
Just dial
ಫೋರಂ ರೆಕ್ಸ್ ವಾಕ್ ಮಾಲ್ ಕೂಡ ಬಿಗ್ರೇಡ್ ರೋಡ್‌ನಲ್ಲಿದ್ದು, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಮೀಪದಲ್ಲಿದೆ.
ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ