ಸಿಎಸ್‌ಕೆ ನಾಯಕ ಎಂಎಸ್‌ ಧೋನಿ ಈಗಾಗಲೇ ತಂಡದ ಕ್ಯಾಂಪ್‌ ಸೇರಿಕೊಂಡಿದ್ದಾರೆ.

By Jayaraj
Mar 11, 2024

Hindustan Times
Kannada

ಚೆಪಾಕ್‌ ಅಂಗಳದಲ್ಲಿ ಮಾಹಿ ಅಭ್ಯಾಸ ಆರಂಭಿದ್ದಾರೆ.

ನೆಟ್ಸ್‌ನಲ್ಲಿ ಧೋನಿ ಬ್ಯಾಟಿಂಗ್‌ ಅಭ್ಯಾಸ ಮಾಡಿದ್ದಾರೆ.

ಅವರೊಂದಿಗೆ ತಂಡದ ಸಹ ಆಟಗಾರರು ಕೂಡಾ ಸೇರಿಕೊಂಡಿದ್ದಾರೆ.

ಮಾಹಿ ಅಭ್ಯಾಸದ ಫೋಟೋಗಳನ್ನು ಸಿಎಸ್‌ಕೆ ಫ್ರಾಂಚೈಸ್‌ ಹಂಚಿಕೊಂಡಿದೆ.

ಒಂದು ವರ್ಷದ ಬಳಿಕ ಯೆಲ್ಲೋ ಜೆರ್ಸಿ ತೊಟ್ಟು ಧೋನಿ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಬಾರಿಯ ಆವೃತ್ತಿಗೆ ಮಾಹಿಯ ಹೇರ್‌ ಸ್ಟೈಲ್‌ ಕೂಡಾ ಬದಲಾಗಿದೆ. ಹಳೆಯ ಧೋನಿಯಂತೆ ಉದ್ದನೆಯ ಕೂದಲು ಬಿಟ್ಟಿದ್ದಾರೆ.

ಸಿಎಸ್‌ಕೆ ತಂಡವು ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ.

ಉದ್ಘಾಟನಾ ಪಂದ್ಯವು ಮಾರ್ಚ್‌ 22ರಂದು ಚೆಪಾಕ್‌ ಮೈದಾನದಲ್ಲಿ ನಡೆಯಲಿದೆ.

ಹಳದಿ ಬಣ್ಣದ ಗೌನ್‌ ತೊಟ್ಟ ತುಪ್ಪದ ಬೆಡಗಿ; ಇಲ್ಲಿವೆ ರಾಗಿಣಿ ದ್ವಿವೇದಿ ಫೋಟೋಸ್