ಕೊಹ್ಲಿ-ನನ್ನ ಸಂಬಂಧ ದೇಶಕ್ಕೆ ತಿಳಿಯಬೇಕಿಲ್ಲ: ಗಂಭೀರ್

By Prasanna Kumar P N
May 30, 2024

Hindustan Times
Kannada

ಕೆಕೆಆರ್ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಆಗಲು ನೆರವಾದ ಮೆಂಟರ್​ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಜೊತೆಗಿನ ಸಂಬಂಧದ ಕುರಿತು ಮಾತನಾಡಿದ್ದಾರೆ.

ಮುಕ್ತಾಯಗೊಂಡ 2024ರ ಐಪಿಎಲ್​ನಲ್ಲಿ ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಪಂದ್ಯದಲ್ಲಿ ಕೊಹ್ಲಿ ಮತ್ತು ಗಂಭೀರ್ ಇಬ್ಬರು ಮುನಿಸು ಮರೆತು ಒಂದಾಗಿದ್ದರು.

ಕೊಹ್ಲಿ-ಗಂಭೀರ್‌ ಪಂದ್ಯದ ಟೈಮ್​ಔಟ್ ವೇಳೆ ಒಬ್ಬರಿರೊಬ್ಬರು ಪರಸ್ಪರ ಅಪ್ಪುಗೆ ನೀಡುವ ಮೂಲಕ ತಮ್ಮಿಬ್ಬರ ನಡುವಿನ ದ್ವೇಷ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.

ಅದಕ್ಕೂ ಮುನ್ನಾ ಐಪಿಎಲ್​ನಲ್ಲಿ ಮೈದಾನದಲ್ಲಿ ಕಚ್ಚಾಡಿಕೊಂಡಿದ್ದರು. ಸಾಕಷ್ಟು ಬಾರಿ ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿ ಕಿತ್ತಾಡಿದ್ದರು.

ಇದೀಗ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಿದ ಗಂಭೀರ್​, ಕೊಹ್ಲಿಯೊಂದಿಗಿನ ನನ್ನ ಸಂಬಂಧವು ದೇಶಕ್ಕೆ ತಿಳಿಯಬೇಕಾಗಿಲ್ಲ. ತಮ್ಮ ತಂಡ ಗೆಲ್ಲಲು ತನ್ನತನವನ್ನೂ ತೋರಿಸಲು ಇಬ್ಬರಿಗೂ ಹಕ್ಕಿದೆ. ನಮ್ಮ ಸಂಬಂಧ ಮಸಾಲ ಕೊಡುವಂತದ್ದಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಕೊಹ್ಲಿ ಸಿಕ್ಸರ್​​ಗಳ ಪರಾಕ್ರಮ ಗಂಭೀರ್ ಶ್ಲಾಘಿಸಿದ್ದಾರೆ. ಗಂಭೀರ್​​ಗೂ ಮೊದಲು ಕೊಹ್ಲಿ ಈ ಬಗ್ಗೆ ಮಾತನಾಡಿದ್ದರು. ನನ್ನ ನಡವಳಿಕೆಯಿಂದ ಜನರು ನಿರಾಸೆಗೊಂಡಿದ್ದಾರೆ ಎಂದಿದ್ದರು.

ನಾನು ನವೀನ್ ಉಲ್​ ಹಕ್​ ಅವರನ್ನು ತಬ್ಬಿಕೊಂಡೆ. ನಂತರ ಗೌತಿ ಭಾಯ್ (ಗೌತಮ್ ಗಂಭೀರ್) ಬಂದು ನನ್ನನ್ನು ತಬ್ಬಿಕೊಂಡರು. ನಿಮಗೆ ಬೇಕಿದ್ದ ಮಸಾಲಾ ಮುಗಿದಿದೆ ಎಂದು ಕೊಹ್ಲಿ ಹೇಳಿದ್ದರು.

ಕೆಕೆಆರ್ ಮೆಂಟರ್ ಆಗಿ ಗಂಭೀರ್​ ಟ್ರೋಫಿ ಗೆದ್ದುಕೊಂಡರೆ, ಕೊಹ್ಲಿ ಅತ್ಯಧಿಕ ರನ್ ಗಳಿಸಿ ಆರೆಂಜ್ ಕ್ಯಾಪ್​ ವಶಪಡಿಸಿಕೊಂಡರು.

ಭಾರತದ ಮಿಸ್ ಎಐ - ಝರಾ ಶತಾವರಿ

zarashatavari