ಕ್ರಿಕೆಟಿಗ ದೀಪಕ್ ಚಹಾರ್ ಸಹೋದರಿ ಖ್ಯಾತ ನಟಿ 

By Jayaraj
Jun 21, 2024

Hindustan Times
Kannada

ಸಿಎಸ್‌ಕೆ ಹಾಗೂ ಟೀಮ್‌ ಇಂಡಿಯಾ ಕ್ರಿಕೆಟಿಗ ದೀಪಕ್ ಚಹಾರ್ ಅವರ ಸಹೋದರಿ ಮಾಲತಿ ಚಹಾರ್, ಮನಮೋಹಕ ನೋಟದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ.

ಚಹಾರ್ ಅವರ ಸಹೋದರಿ ವೃತ್ತಿಯಲ್ಲಿ ನಟಿ.

ಆಗ್ರಾದಲ್ಲಿ ವಾಸಿಸುತ್ತಿರುವ ಮಾಲತಿ, ಜಾಹೀರಾತು ಮತ್ತು ಒಟಿಟಿ ಮಾತ್ರವಲ್ಲದೆ ಬೆಳ್ಳಿತೆರೆಯ ಮೇಲೂ ಛಾಪು ಮೂಡಿಸಿದ್ದಾರೆ.

ಇವರು ಅನೇಕ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ಮೆನಿಕ್ಯೂರ್ ಕಿರುಚಿತ್ರದ ಮೂಲಕ ಸಾಕಷ್ಟು ಹೆಸರು ಗಳಿಸಿದ್ದಾರೆ.

2017ರಲ್ಲಿ ಬಿಡುಗಡೆಯಾದ ಲೆಟ್ಸ್ ಮೇರಿ ಡಾಟ್ ಕಾಮ್ ಕಿರುಚಿತ್ರದ ನಿರ್ದೇಶಕಿಯೂ ಆಗಿದ್ದಾರೆ.

ಐಇಟಿ ಲಕ್ನೋದಿಂದ ಸಾಫ್ಟ್‌ವೇರ್‌ನಲ್ಲಿ ಎಂಜಿನಿಯರಿಂಗ್ ಮಾಡಿರುವ ಮಾಲತಿ, ಚಲನಚಿತ್ರ ಮಾತ್ರವಲ್ಲದೆ ಜಾಹೀರಾತುಗಳ ಮೂಲಕವೂ ಸಂಪಾದನೆ ಮಾಡುತ್ತಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಮಾಲತಿಗೆ 1 ಮಿಲಿಯನ್‌ಗೂ ಹೆಚ್ಚು ಫಾಲೊವರ್‌ಗಳಿದ್ದಾರೆ

ದೀಪಕ್ ಚಹಾರ್ ಸಹೋದರಿ ತಮ್ಮ ಫಿಟ್ನೆಸ್ ಬಗ್ಗೆಯೂ ಹೆಚ್ಚು ಗಮನ ಹರಿಸುತ್ತಾರೆ.

ನಟನೆ ಹೊರತಾಗಿ ಚಿತ್ರಕಲೆಯಲ್ಲೂ ಇವರಿಗೆ ಆಸಕ್ತಿ ಇದೆ. ವಿಭಿನ್ನ ವಸ್ತುಗಳನ್ನು ಬಳಸಿ ಪೇಂಟಿಂಗ್ ಮಾಡುತ್ತಾರೆ.

ಮಾಸ್ಟರ್‌ ಪೀಸ್‌ ಚೆಲುವೆ ಜ್ಯೋತಿ ರೈ ಹೊಸ ಫೋಟೋಗಳು