ಕರ್ನಾಟಕದ ಮಾಜಿ ಕ್ರಿಕೆಟಿಗ ಆತ್ಮಹತ್ಯೆ; ಕಾರಣವೇನು?
By Prasanna Kumar P N
Jun 20, 2024
Hindustan Times
Kannada
ಭಾರತ ಹಾಗೂ ಕರ್ನಾಟಕ ತಂಡದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ (52) ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಕೊತ್ತನೂರು ಬಳಿಯಿರುವ ಅಪಾರ್ಟ್ಮೆಂಟ್ ಬಳಿ ಕಟ್ಟಡದಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಜಾನ್ಸನ್ ಡೇವಿಡ್ ಮೂಲದವರು. 1996ರಲ್ಲಿ ಟೀಮ್ ಇಂಡಿಯಾ ಪರ 2 ಟೆಸ್ಟ್ ಆಡಿದ್ದರು. ಆಸ್ಟ್ರೇಲಿಯಾ ವಿರುದ್ಧ 1 ಟೆಸ್ಟ್ ಆಡಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಆಡಿದ್ದರು. ಈ 2 ಟೆಸ್ಟ್ ಪಂದ್ಯಗಳಲ್ಲಿ 8 ರನ್ ಮತ್ತು 3 ವಿಕೆಟ್ ಕಬಳಿಸಿದ್ದಾರೆ.
ಜಾನ್ಸನ್ ವಿಪರೀತ ಕುಡಿತದ ಚಟ ಹೊಂದಿದ್ದರು. ಕೆಲ ವರ್ಷಗಳಿಂದ ಅನಾರೋಗ್ಯಕ್ಕೂ ಒಳಗಾಗಿದ್ದರು. ಹೀಗಾಗಿ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 39 ಪಂದ್ಯಗಳಿಂದ 437 ರನ್, ಲಿಸ್ಟ್ 2 ಕ್ರಿಕೆಟ್ನಲ್ಲಿ 33 ಪಂದ್ಯಗಳನ್ನಾಡಿ 118 ರನ್ ಬಾರಿಸಿದ್ದಾರೆ.
The Hindu
1971ರ ಅಕ್ಟೋಬರ್ 16ರಂದು ಹಾಸನದ ಅರಸಿಕೆರೆಯಲ್ಲಿ ಜನಿಸಿದ್ದ ಡೇವಿಡ್ ಜಾನ್ಸನ್ ನಿಧನಕ್ಕೆ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.
ಹೊಸ ಫೋಟೋಗಳನ್ನು ಹಂಚಿಕೊಂಡ ಅನುಪಮಾ ಗೌಡ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ