ಐದು ಬಾರಿ ಗೆದ್ದಿದ್ದ ಎಂಪಿಯನ್ನೇ ಸೋಲಿಸಿದ ಯೂಸಫ್ ಪಠಾಣ್!

By Prasanna Kumar P N
Jun 04, 2024

Hindustan Times
Kannada

ಲೋಕಸಭಾ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಯೂಸಫ್ ಪಠಾಣ್ ಅವರು ಮೊದಲ ಅಗ್ನಿಪರೀಕ್ಷೆಯಲ್ಲೇ ಗೆದ್ದು ಬೀಗಿದ್ದಾರೆ.

ಸತತ ಐದು ಬಾರಿ ಗೆಲುವು ಸಾಧಿಸಿದ್ದ ಅಧೀರ್ ರಂಜನ್ ಚೌಧರಿ ಅವರನ್ನು ಯೂಸಫ್ ಮಣಿಸಿದ್ದು, ಮೊದಲ ಎಸೆತದಲ್ಲೇ ಸಿಕ್ಸರ್​ ಬಾರಿಸಿದ್ದಾರೆ.

ತೃಣಮೂಲ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಯೂಸಫ್​ ಪಠಾಣ್, ಕಾಂಗ್ರೆಸ್​ನ ಅಧೀರ್ ರಂಜನ್ ಚೌಧರಿಯನ್ನು ಸೋಲಿಸಿದ್ದಾರೆ.

ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದಿಂದ ಲೋಕಸಭಾ ಕ್ಷೇತ್ರದಿಂದ ಯೂಸಫ್ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ದಿಗ್ವಿಜಯ ಸಾಧಿಸಿದ್ದಾರೆ.

ಯೂಸಫ್ 5,18,066 ಮತ ಪಡೆದಿದ್ದರೆ, ಅಧೀರ್​ 432340 ಮತ ಪಡೆದಿದ್ದಾರೆ. 85726 ವೋಟುಗಳಿಂದ ಕ್ರಿಕೆಟಿಗ ಗೆದ್ದಿದ್ದಾರೆ.

ಆಂಡ್ರೆ ರಸೆಲ್ ಪತ್ನಿ ಬ್ಯೂಟಿ ಮಾತ್ರವಲ್ಲ ಫಿಟ್ ಕೂಡಾ