ಕೊಹ್ಲಿಗೆ ಪ್ರಪೋಸ್ ಮಾಡಿದ್ದ ಇಂಗ್ಲೆಂಡ್‌ ಆಟಗಾರ್ತಿಗೆ ಮದುವೆ

By Jayaraj
Jun 11, 2024

Hindustan Times
Kannada

ಇಂಗ್ಲೆಂಡ್‌ನ ಸ್ಟಾರ್ ಕ್ರಿಕೆಟ್‌ ಆಟಗಾರ್ತಿ ಡ್ಯಾನಿ ವ್ಯಾಟ್, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ದೀರ್ಘಕಾಲದ ಗೆಳತಿಯೊಂದಿಗೆ ಮದುವೆಯಾಗಿದ್ದಾರೆ.

ಡ್ಯಾನಿ ವ್ಯಾಟ್ ಜೂನ್ 10ರಂದು ಲಂಡನ್‌ನಲ್ಲಿ ವಿವಾಹವಾದರು.

ಡ್ಯಾನಿಯ ಜೀವನ ಸಂಗಾತಿಯ ಹೆಸರು ಜಾರ್ಜಿ ಹಾಡ್ಜ್. ಜಾರ್ಜಿ ವೃತ್ತಿಯಲ್ಲಿ ಫುಟ್ಬಾಲ್ ಟ್ಯಾಲೆಂಟ್‌ ಏಜೆಂಟ್ ಆಗಿದ್ದಾರೆ.

2019ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿರುವ ಈ ಜೋಡಿ 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಡ್ಯಾನಿ ವ್ಯಾಟ್, ಭಾರತ ಕ್ರಿಕೆಟ್‌ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಹಿಂದೊಮ್ಮೆ ಪ್ರಪೋಸ್ ಮಾಡಿದ್ದರು.

2014ರಲ್ಲಿ, ಡ್ಯಾನಿ ಟ್ವಿಟರ್ ಪೋಸ್ಟ್ ಮೂಲಕ ವಿರಾಟ್‌ಗೆ ಮದುವೆ ಪ್ರಸ್ತಾಪ ಮಾಡಿದ್ದರು. 'ವಿರಾಟ್ ಕೊಹ್ಲಿ, ನನ್ನನ್ನು ಮದುವೆಯಾಗು' ಎಂದು ಡ್ಯಾನಿ ಪೋಸ್ಟ್‌ ಮಾಡಿದ್ದರು.

ಅದಾದ ನಂತರ, ಪ್ರಸಿದ್ಧ ಕಾಮಿಡಿ ಶೋ ಕಪಿಲ್ ಶರ್ಮಾ ಶೋಗೆ ಬಂದಿದ್ದ  ವಿರಾಟ್, ಅದಕ್ಕೆ ಪ್ರತಿಕ್ರಿಯಿಸಿದರು.

ಡ್ಯಾನಿ ಪ್ರಪೋಸ್‌ ಸುದ್ದಿ ಹರಡಿದ ನಂತರ ನನ್ನ ತಾಯಿ ಮಾಧ್ಯಮಗಳಿಗೆ 'ನನ್ನ ಮಗನಿಗೆ ಇನ್ನೂ ಮದುವೆ ವಯಸ್ಸಾಗಿಲ್ಲ' ಎಂದು ಹೇಳಿದ್ದಾಗಿ ವಿರಾಟ್ ಹೇಳಿದ್ದರು.

ತೂಕ ನಷ್ಟ ಸೇರಿ ಮಾವಿನಹಣ್ಣು ಸೇವನೆಯಿಂದ ಸಿಗುವ 5 ಪ್ರಯೋಜನಗಳಿವು