ಧೋನಿ ಹೊಸ ಹೇರ್ ಸ್ಟೈಲ್; ಅಂಡರ್-19 ಆಡ್ತೀರಾ ಎಂದ ಫ್ಯಾನ್ಸ್

By Jayaraj
Jun 29, 2024

Hindustan Times
Kannada

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಹೇರ್ ಸ್ಟೈಲ್‌ ವಿಷಯದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ.

ಐಪಿಎಲ್ 17ನೇ ಆವೃತ್ತಿಯಲ್ಲಿ ಉದ್ದನೆಯ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದ ಮಾಹಿ, ಮತ್ತೆ ಹೇರ್ ಕಟ್ ಮಾಡಿಸಿದ್ದಾರೆ.

ಮಾಜಿ ನಾಯಕನ ಹೊಸ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಂದಿನಂತೆ, ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರಿಂದ ಧೋನಿ ತಮ್ಮ ಹೇರ್‌ಸ್ಟೈಲ್‌ ಮಾಡಿಸಿದ್ದಾರೆ.

ಆಲಿಮ್ ಹಕೀಮ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಧೋನಿಯ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ.

ಐಪಿಎಲ್‌ ಸಮಯದಲ್ಲಿ ಮಾಹಿ ಲಾಂಗ್‌ ಹೇರ್‌ ಜೊತೆಗೆ ತಮ್ಮ ವಿಂಟೇಜ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.

ಈ ಬಾರಿ ಉದ್ದನೆಯ ಕೂದಲನ್ನು ಕತ್ತರಿಸಿ ಶಾರ್ಟ್‌ ಮಾಡಿಸಿದ್ದಾರೆ.

ಮಾಹಿ ಫೋಟೋಗೆ ನೆಟ್ಟಿಗರಿಂದ ಬಗೆಬಗೆಯ ಕಾಮೆಂಟ್‌ಗಳು ಹರಿದು ಬಂದಿವೆ.

ಒಬ್ಬ ಬಳಕೆದಾರ, "ಮಾಹಿ ನೀವು ಅಂಡರ್-19 ಆಡಲು ಯೋಜಿಸುತ್ತೀರಾ?" ಎಂದು ಕೇಳಿದರೆ; ಮತ್ತೋರ್ವ "ಬಾಲಿವುಡ್ ನಟನಿಗಿಂತ ಉತ್ತಮವಾಗಿದೆ" ಎಂದಿದ್ದಾರೆ.

ಧೋನಿಗೆ ಈಗ 43 ವರ್ಷ ವಯಸ್ಸು. ಆದರೆ, ಈ ಫೋಟೋದಲ್ಲಿ ಅವರು 30ರ ಹರೆಯದ ಯುವಕನಂತೆ ಕಾಣುತ್ತಿದ್ದಾರೆ.

ಸಮೋಸಾದಿಂದ ಚಿಕನ್‌ ವಿಂಗ್ಸ್‌ವರೆಗೆ; ವೀಕೆಂಡ್‌ ಪಾರ್ಟಿಗೆ ಹೇಳಿ ಮಾಡಿಸಿದ ಸ್ನ್ಯಾಕ್ಸ್‌ಗಳು