ನೂತನ ಹೆಡ್ಕೋಚ್ ಗೌತಮ್ ಗಂಭೀರ್ ಆಸ್ತಿ ಎಷ್ಟು?
By Prasanna Kumar P N
Jul 11, 2024
Hindustan Times
Kannada
ಟೀಮ್ ಇಂಡಿಯಾ ನೂತನ ಹೆಡ್ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ನಂತರ ರಾಹುಲ್ ದ್ರಾವಿಡ್ ಅವರಿಂದ ತೆರವಾದ ಸ್ಥಾನವನ್ನು ಗಂಭೀರ್ ತುಂಬಿದ್ದಾರೆ.
2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ಗಂಭೀರ್, 2027ರ ತನಕ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ.
ಕೋಚ್ ಆಗುವುದಕ್ಕೂ ಮುನ್ನ 2024ರ ಐಪಿಎಲ್ನಲ್ಲಿ ಕೆಕೆಆರ್ಗೆ ಮೆಂಟರ್ ಆಗಿದ್ದರು. ಅಲ್ಲದೆ ತಂಡವನ್ನು ಚಾಂಪಿಯನ್ ಮಾಡಿದ್ದರು.
ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾದ ಗೌತಮ್ ಗಂಭೀರ್ ಅಂದಾಜು ಒಟ್ಟು ಸಂಪತ್ತು 265 ಕೋಟಿ ($32 ಮಿಲಿಯನ್) ಹೊಂದಿದ್ದಾರೆ.
ಗಂಭೀರ್ ಆದಾಯ ಕ್ರಿಕೆಟ್‌ನಿಂದ ಮಾತ್ರವಲ್ಲ ಬ್ರ್ಯಾಂಡ್ಗಳ ಜಾಹೀರಾತು, ವಿವಿಧ ವ್ಯಾಪಾರ ಉದ್ಯಮಗಳಿಂದ ಕೂಡಿದೆ.
ಗಂಭೀರ್ ಅವರು ಉಡುಪು ವ್ಯವಹಾರಗಳು, ರೆಸ್ಟೋರೆಂಟ್‌ಗಳು ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಒಟ್ಟು ಸಂಪತ್ತು ಮತ್ತು ಗಳಿಕೆಯಲ್ಲಿ 19% ಹೆಚ್ಚಳವಾಗಿದೆ ಎಂದು ವರದಿಯಾಗಿದೆ.
ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ