ಪಾಕಿಸ್ತಾನ ವಿರುದ್ಧ ಗೆದ್ದು ವಿಶ್ವದಾಖಲೆ ನಿರ್ಮಿಸಿದ ಭಾರತ
All Photos From BCCI X
By Prasanna Kumar P N Jun 10, 2024
Hindustan Times Kannada
ಟಿ20 ವಿಶ್ವಕಪ್ 2024ರಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ 6 ರನ್ಗಳ ರೋಚಕ ಗೆಲುವು ಸಾಧಿಸಿ ವಿಶ್ವದಾಖಲೆ ನಿರ್ಮಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 19 ಓವರ್ಗಳಲ್ಲಿ 119 ರನ್ಗಳಿಸಲಷ್ಟೇ ಶಕ್ತವಾಯಿತು.
ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 20 ಓವರ್ಗಳಲ್ಲಿ 113 ರನ್ ಗಳಿಸಿ 6 ರನ್ಗಳಿಂದ ಶರಣಾಯಿತು.
ಈ ಜಯದೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ ಅತ್ಯಧಿಕ ಗೆಲುವು ಸಾಧಿಸಿದ ವಿಶ್ವದಾಖಲೆ ಭಾರತದ ಪಾಲಾಯಿತು.
ಟಿ20 ವಿಶ್ವಕಪ್ನಲ್ಲಿ ಒಂದೇ ತಂಡದ ವಿರುದ್ಧ ಅಧಿಕ ಬಾರಿ ಜಯಿಸಿದ ದಾಖಲೆ ಪಾಕ್ ತಂಡದ ಹೆಸರಿನಲ್ಲಿತ್ತು. ಬಾಂಗ್ಲಾದೇಶ ವಿರುದ್ಧ ಪಾಕ್ 6 ಬಾರಿ ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿತ್ತು
ಭಾರತ ಕೂಡ ಅಷ್ಟೆ ಪಂದ್ಯಗಳನ್ನು ಪಾಕ್ ಎದುರು ಗೆದ್ದಿತ್ತು. ಇದೀಗ ಮತ್ತೊಂದು ಗೆಲುವು ಸೇರ್ಪಡೆಯಾಗಿದ್ದು, ಒಂದೇ ತಂಡದ ವಿರುದ್ಧ ಅತ್ಯಧಿಕ ಗೆಲುವು ಕಂಡ ಇತಿಹಾಸ ನಿರ್ಮಿಸಿದೆ.
ಇಲ್ಲಿದೆ 5 ಬೆಸ್ಟ್ ಬೀಟ್‌ರೂಟ್ ರೆಸಿಪಿ, ತಿಂದವರು ಸೂಪರ್ ಅಂತಾರೆ