ಟಿ20 ವಿಶ್ವಕಪ್​ ಫೈನಲ್; ಭಾರತ vs ಸೌತ್ ಆಫ್ರಿಕಾ ಮುಖಾಮುಖಿ ದಾಖಲೆ

By Prasanna Kumar P N
Jun 28, 2024

Hindustan Times
Kannada

ಟಿ20 ವಿಶ್ವಕಪ್ 2024ರ ಫೈನಲ್​​ ಪಂದ್ಯವು ಜೂನ್ 29ರಂದು ನಡೆಯಲಿದ್ದು, ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ ಮೈದಾನವು ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ರಾತ್ರಿ 8 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.

ಎರಡು ತಂಡಗಳ ನಡುವೆ ಟಿ20ಐ ಕ್ರಿಕೆಟ್​ನಲ್ಲಿ ಮುಖಾಮುಖಿ ದಾಖಲೆ ಹೇಗಿದೆ? ಟಿ20 ವಿಶ್ವಕಪ್​ನಲ್ಲಿ ಎರಡು ತಂಡಗಳ ದಾಖಲೆ ಹೇಗಿದೆ? ಇಲ್ಲಿದೆ ವಿವರ.

ಟಿ20ಐ ಕ್ರಿಕೆಟ್​ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ತಂಡಗಳು ಒಟ್ಟು 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 14 ರಲ್ಲಿ ಗೆಲುವು, ಆಫ್ರಿಕಾ 11ರಲ್ಲಿ ಗೆಲುವು ಸಾಧಿಸಿದೆ. 1 ಪಂದ್ಯ ರದ್ದಾಗಿದೆ.

ಇನ್ನು ಟಿ20 ವಿಶ್ವಕಪ್​​ಗಳಲ್ಲಿ ಇಂಡೋ-ಆಫ್ರಿಕಾ 6 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಭಾರತ 4ರಲ್ಲಿ ಗೆದ್ದು ಮೇಲುಗೈ ಸಾಧಿಸಿದೆ. , ಆಫ್ರಿಕಾ 2ರಲ್ಲಿ ಜಯಿಸಿದೆ.

JOBS: ಜುಲೈ ಮುಗಿಯುವುದರೊಳಗೆ ಅಪ್ಲೈ ಮಾಡಿ, ಇಲ್ಲಿವೆ ಉದ್ಯೋಗಾವಕಾಶ 

Unsplash