ಕ್ರಿಕೆಟಿಗ ಕೆಎಲ್ ರಾಹುಲ್ ಅವರ ಇಂಟರೆಸ್ಟಿಂಗ್ ಲವ್ ಸ್ಟೋರಿ ಇದು

By Raghavendra M Y
May 12, 2024

Hindustan Times
Kannada

ಕ್ರಿಕೆಟ್ ಮತ್ತು ಬಾಲಿವುಡ್‌ ನಂಟು ಬಹಳ ಹಳೆಯದು. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಾಹುಲ್ ಬಾಲಿವುಡ್ ನಟಿಯನ್ನು ವಿವಾಹವಾಗಿದ್ದಾರೆ

ಕೆಎಲ್ ರಾಹುಲ್ ಅವರ ಲವ್ ಸ್ಟೋರಿ ತುಂಬಾ ಇಂಟರೆಸ್ಟಿಂಗ್ ಆಗಿದೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳನ್ನು ರಾಹುಲ್ ಪ್ರೀತಿಸಿದರು

ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಮತ್ತು ಕೆಎಲ್ ರಾಹುಲ್ 2019ರಲ್ಲಿ ಕಾಮನ್ ಫ್ರೆಂಡ್ ಮೂಲಕ ಭೇಟಿಯಾಗುತ್ತಾರೆ

ಬಳಿಕ ಇಬ್ಬರೂ ಮಾತನಾಡಲು ಶುರು ಮಾಡುತ್ತಾರೆ. ನಂತರ ಇವರ ಸ್ನೇಹ ಪ್ರೀತಿಗೆ ತಿರುಗಿತು

ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿರುವ ರಾಹುಲ್, ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದ ಅಥಿಯಾ ಕೆಲಕಾಲ ತಮ್ಮ ಸ್ನೇಹ, ಪ್ರೀತಿಯನ್ನು ಗೌಪ್ಯವಾಗಿಟ್ಟಿದ್ದರು

ಸಮಯ ಕಳೆಯುತ್ತಿದ್ದಂತೆ ಇಬ್ಬರು ತಮ್ಮ ಪ್ರೀತಿಯ ಬಗ್ಗೆ ಆಪ್ತರು ಮತ್ತು ಕುಟುಂಬಸ್ಥರಿಗೆ ತಿಳಿಸಿದ್ದಾರೆ

ಬಳಿಕ ಇಬ್ಬರು ಕಾರ್ಯಕ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಫೋಟೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡರು

2021ರಲ್ಲಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಅಥಿಯಾ ಅವರೊಂದಿಗಿನ ಸಂಬಂಧವನ್ನು ರಾಹುಲ್ ಬಹಿರಂಗಪಡಿಸಿದರು

ಇದೇ ಸಮಯದಲ್ಲಿ ಕೆಎಲ್ ರಾಹುಲ್ ಮತ್ತು ಅಥಿಯಾ ಕೆಲವು ಜಾಹೀರಾತುಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು

3 ವರ್ಷಗಳ ಸ್ನೇಹ, ಪ್ರೀತಿಯ ನಂತರ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ 2023ರ ಜನವರಿ 23 ರಂದು ವಿವಾಹವಾದರು

IPL 2024: ಭಾರಿ ಅಂತರದ ಗೆಲುವು ದಾಖಲಾದ ಪಂದ್ಯಗಳು