ದಿನೇಶ್ ಕಾರ್ತಿಕ್ ನಿವ್ವಳ ಆಸ್ತಿ ಮೌಲ್ಯ

By Jayaraj
Apr 17, 2024

Hindustan Times
Kannada

ಐಪಿಎಲ್‌ 2024ರಲ್ಲಿ ಆರ್‌ಸಿಬಿ ಪರ ದಿನೇಶ್‌ ಕಾರ್ತಿಕ್‌ ಅಬ್ಬರಿಸುತ್ತಿದ್ದಾರೆ.

ಈವರೆಗೆ ಬ್ಯಾಟ್‌ ಬೀಸಿದ 6 ಇನ್ನಿಂಗ್ಸ್‌ಗಳಲ್ಲಿ 226 ರನ್‌ ಸಿಡಿಸಿದ್ದಾರೆ.

ಎಸ್‌ಆರ್‌ಎಚ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ 83(35) ರನ್‌ ಗಳಿಸಿದ್ದರು.

ಹಾಗಿದ್ದರೆ ದಿನೇಶ್‌ ಕಾರ್ತಿಕ್‌ ಬಳಿ ಎಷ್ಟು ಆಸ್ತಿ ಇದೆ ಎಂಬುದನ್ನು ತಿಳಿಯೋಣ.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವ ಡಿಕೆ ಅವರಿನ್ನು, ಫ್ರಾಂಚೈಸಿಯು 5.5 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ.

ದಿನೇಶ್‌ ಅವರ ನಿವ್ವಳ ಮೌಲ್ಯ 95 ಕೋಟಿ ರೂಪಾಯಿ ಎಂಬುದಾಗಿ ಹಲವು ವರದಿಗಳು ತಿಳಿಸಿವೆ.

38 ವರ್ಷದ ಅನುಭವಿ ಆಟಗಾರ ಐಪಿಎಲ್‌ ಹಾಗೂ ಭಾರತ ತಂಡದ ಪರ ಈಗಲೂ ಆಡುತ್ತಿದ್ದಾರೆ.

ಇದರೊಂದಿಗೆ, ಕಾಮೆಂಟರಿ ಮೂಲಕವೂ ಸಂಪಾದನೆ ಮಾಡುತ್ತಿದ್ದಾರೆ.

ವಿವಿಧ ಸಂಸ್ಥೆಗಳೊಂದಿಗಿನ ಜಾಹೀರಾತು ಒಪ್ಪಂದದಿಂದಲೂ ಕಾರ್ತಿಕ್‌ ಹಣ ಗಳಿಸುತ್ತಾರೆ.

ಜಂಡು ಬಾಮ್, ವೀನಸ್, ಖಾದಿಮ್ ಇಂಡಿಯಾ ಲಿ., ಬ್ಲ್ಯಾಕ್‌ಬೆರಿಸ್ ಜೊತೆಗೆ ಡಿಕೆ ಒಪ್ಪಂದ ಮಾಡಿಕೊಂಡಿದ್ದಾರೆ.

ಹಿಂದೂ ಧರ್ಮದಲ್ಲಿ ಸಂಖ್ಯೆ 4ರ ವೈಶಿಷ್ಟ್ಯಗಳಿವು