ಕೆಕೆಆರ್‌ vs ಎಸ್‌ಆರ್‌ಎಚ್‌: ಯಾರು ಬಲಿಷ್ಠ?

By Jayaraj
Mar 22, 2024

Hindustan Times
Kannada

ಐಪಿಎಲ್‌ 2024ರ ಆವೃತ್ತಿಯ ಮೂರನೇ ಪಂದ್ಯದಲ್ಲಿ ಕೆಕೆಆರ್‌ ಮತ್ತು ಎಸ್‌ಆರ್‌ಎಚ್‌ ತಂಡಗಳು ಮುಖಾಮುಖಿಯಾಗುತ್ತಿವೆ.

ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳು ಈವರೆಗೆ ಐಪಿಎಲ್‌ನಲ್ಲಿ ಒಟ್ಟು 25 ಬಾರಿ ಪರಸ್ಪರ ಮುಖಾಮುಖಿಯಾಗಿವೆ.

ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 16 ಪಂದ್ಯಗಳಲ್ಲಿ ಗೆದ್ದಿದೆ.

ಸನ್ ರೈಸರ್ಸ್ ಹೈದರಾಬಾದ್ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ.

ಈಡನ್‌ ಗಾರ್ಡನ್ಸ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ ಕೆಕೆಆರ್‌ 6ರಲ್ಲಿ ಮೇಲುಗೈ ಸಾಧಿಸಿದೆ.

ಕೋಲ್ಕತ್ತಾದಲ್ಲಿ ಕೆಕೆಆರ್‌ ವಿರುದ್ಧ ಎಸ್‌ಆರ್‌ಎಚ್‌ 3 ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಉಭಯ ತಂಡಗಳ ಮುಖಾಮುಖಿ ವೇಳೆ ಡೇವಿಡ್‌ ವಾರ್ನರ್‌ 619 ರನ್‌ ಗಳಿಸಿದ ದಾಖಲೆ ಹೊಂದಿದ್ದಾರೆ.

ಉಭಯ ತಂಡಗಳು ಕೂಡಾ ಈ ಬಾರಿ ಹೊಸ ನಾಯಕನೊಂದಿಗೆ ಕಣಕ್ಕಿಳಿಯುತ್ತಿವೆ.

ಕುಟ್ಟು ದೋಸೆ ತಯಾರಿಸುವ ವಿಧಾನ