ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ 5 ಸಂಭಾವ್ಯ ಬದಲಾವಣೆಗಳು

By Jayaraj
Jul 31, 2024

Hindustan Times
Kannada

ಐಪಿಎಲ್‌ 2025ರ ಮೆಗಾ ಹರಾಜಿಗಾಗಿ ಅಭಿಮಾನಿಗಳ ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳು ಆಗಲಿವೆ.

ಇದೇ ವಿಚಾರವಾಗಿ ಇಂದು ಬಿಸಿಸಿಐ ಹಾಗೂ ಫ್ರಾಂಚೈಸಿಗಳ ಮಾಲೀಕರ ಸಭೆ ನಡೆಯುತ್ತಿದೆ.

ಈವರೆಗೆ 4 ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಯುತ್ತಿದ್ದವು. ವರದಿಗಳ ಪ್ರಕಾರ, ಮುದೆ 5 ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಯುವ ಸಾಧ್ಯತೆ ಇದೆ.

ಪ್ರತಿ ತಂಡಗಳಿಗೂ 5 ಆಟಗಾರರನ್ನು (ಒಬ್ಬ ವಿದೇಶಿ ಹಾಗೂ ಅನ್‌ಕ್ಯಾಪ್‌ಡ್‌ ಆಟಗಾರ ಸೇರಿ) ರಿಟೈನ್‌ ಮಾಡಿಕೊಳ್ಳಲು ಅವಕಾಶವಿರಲಿದೆ.

ಈವರೆಗೆ ಪ್ರತಿ ತಂಡಕ್ಕೆ ಹರಾಜಿಗಾಗಿ ಗರಿಷ್ಠ 100 ಕೋಟಿ ರೂಪಾಯಿ ಪರ್ಸ್‌ ನಿಗದಿಯಾಗಿತ್ತು. ಇದು 125 ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ.

ಪ್ರತಿ ಫ್ರಾಂಚೈಸ್‌ಗಳಿಗೂ ತಲಾ 1 ಆರ್‌ಟಿಎಂ (ರೈಟ್‌ ಟು ಮ್ಯಾಚ್)‌ ಅವಕಾಶ ನೀಡಲಾಗುತ್ತದೆ.

ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವನ್ನು ಉಳಿಸಿಕೊಳ್ಳಲಾಗುತ್ತದೆ.

ಕಡಲ ತೀರದಲ್ಲಿ ಕುಟುಂಬದೊಂದಿಗೆ ಕಾಲ ಕಳೆದ ನಟಿ ಅಮೂಲ್ಯ