ಡೆಕ್ಕನ್ ಚಾರ್ಜರ್ಸ್ ಒಡತಿ ಗಾಯತ್ರಿ ರೆಡ್ಡಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ?
By Prasanna Kumar P N
May 19, 2024
Hindustan Times
Kannada
ಐಪಿಎಲ್ನ ತಂಡವಾಗಿದ್ದ ಡೆಕ್ಕನ್ ಚಾರ್ಜರ್ಸ್ ಒಡತಿ ಗಾಯತ್ರಿ ರೆಡ್ಡಿ. ಮೈದಾನಕ್ಕೆ ಹಾಜರಾಗಿ ತಂಡವನ್ನು ಹುರಿದುಂಬಿಸುತ್ತಿದ್ದರು.
ಗಾಯತ್ರಿ ರೆಡ್ಡಿ ಡೆಕ್ಕನ್ ಕ್ರಾನಿಕಲ್ ಪತ್ರಿಕೆಯ ಮಾಲೀಕರ ವೆಂಕಟರಮಣ ರೆಡ್ಡಿ ಪುತ್ರಿ. ಈಕೆ 2011ರಲ್ಲಿ ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಯುವತಿಯಾಗಿದ್ದರು.
ಗಾಯತ್ರಿ ಅವರು ತನ್ನ ತಂದೆಯ ದಿನಪತ್ರಿಕೆಯಲ್ಲಿ ಫೀಚರ್ ವಿಭಾಗಕ್ಕೆ ಸಂಪಾದಕಿಯಾಗಿದ್ದರು. ಅವರ ತಾಯಿ ಮಂಜುಳಾ ಮಾಡುತ್ತಿದ್ದ ಕೆಲಸ ಕೂಡ ಅದೇ ಆಗಿತ್ತು.
ಶಾಲಾ ಶಿಕ್ಷಣವನ್ನು ಹೈದರಾಬಾದ್ನಲ್ಲಿ ಮುಗಿಸಿದ ಗಾಯತ್ರಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಮುಗಿಸಿದ್ದಾರೆ.
2009ರ ಐಪಿಎಲ್ನಲ್ಲಿ ಚಾಂಪಿಯನ್ ಆದ ನಂತರ 2012ರಲ್ಲಿ ತಂಡವು ಟೂರ್ನಿಯಿಂದ ಹೊರ ಬಂತು. ನಂತರ ಸನ್ ಟಿವಿ ಹೈದರಾಬಾದ್ ಫ್ರಾಂಚೈಸಿಯನ್ನು ಖರೀದಿಸಿತು.
1986ರ ಸೆಪ್ಟೆಂಬರ್ 21ರಂದು ಹೈದರಾಬಾದ್ನಲ್ಲಿ ಜನಿಸಿದ ಗಾಯತ್ರಿ, 8 ವರ್ಷಗಳ ಹಿಂದೆ ಏರ್ ಏಷ್ಯಾದಲ್ಲಿ ಪಾಲುದಾರರಾಗಿದ್ದ ಅನಿಶ್ ಭಾಟಿಯಾ ಅವರನ್ನು ಮದುವೆಯಾದರು.
ಅನಿಶ್ ಭಾಟಿಯಾ ಅವರ ಸಹೋದರ ಅಮಿತ್ ಭಾಟಿಯಾ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಲಕ್ಷ್ಮಿವಾಸ್ ಮಿತ್ತಲ್ ಅವರ ಅಳಿಯ. ಮಿತ್ತಲ್ ಅವರ ಪುತ್ರಿಯನ್ನು ಅಮಿತ್ ವರಿಸಿದ್ದಾರೆ.
ಅಮಿತ್ ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಕ್ಲಬ್ ಕ್ವೀನ್ಸ್ ಫಾರ್ಕ್ ರೇಂಜರ್ಸ್ನ ಮಾಲೀಕರಲ್ಲಿ ಒಬ್ಬರು. ಈ ಕ್ಲಬ್ನ ಎರಡನೇ ಮಾಲೀಕರು ಏರ್ ಏಷ್ಯಾದ ಟೋಣಿ ಫರ್ನಾಂಡೀಸ್.
ಬಾಸಿಂಗ ತೊಟ್ಟ ಶ್ರಾವಣಿ; ಮದುಮಗಳ ಅಂದಕ್ಕೆ ಮನಸೋತ ವೀಕ್ಷಕರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ