ಐಪಿಎಲ್ ಸಂಪೂರ್ಣ ಆವೃತ್ತಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಜಾನಿ ಬೇರ್‌ಸ್ಟೋ ಲಭ್ಯ
By Jayaraj
Mar 13, 2024
Hindustan Times
Kannada
ಮಾರ್ಚ್ 22ರಿಂದ ಆರಂಭವಾಗುವ ಟೂರ್ನಿಯಲ್ಲಿ ಆಂಗ್ಲ ಕ್ರಿಕೆಟಿಗ ಪಾಲ್ಗೊಳ್ಳಲಿದ್ದಾರೆ.
ಧರ್ಮಶಾಲಾ ಟೆಸ್ಟ್ ವೇಳೆ, ಬಿಸಿಸಿಐ ಮತ್ತು ಇಸಿಬಿ ಅಧಿಕಾರಿಗಳು ಆಟಗಾರರ ಲಭ್ಯತೆ ಕುರಿತು ಮಾತುಕತೆ ನಡೆಸಿದ್ದಾರೆ.
ಬೇರ್‌ಸ್ಟೋ ಮಾರ್ಚ್ 18 ಅಥವಾ 19ರಂದು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಮಾರ್ಚ್ 23ರಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ.
ಈ ಕುರಿತು ಐಪಿಎಲ್ ಮೂಲಗಳು ತಿಳಿಸಿವೆ.
ಇಂಗ್ಲೆಂಡ್ ತಂಡದ ಹಲವು ಆಟಗಾರರು ಐಪಿಎಲ್ ಟೂರ್ನಿಗೆ ಅಲಭ್ಯರಾಗಿದ್ದಾರೆ.
ನಾಯಕ ಬೆನ್ ಸ್ಟೋಕ್ಸ್, ಜೋ ರೂಟ್ ಮತ್ತು ಮಾರ್ಕ್ ವುಡ್ ಐಪಿಎಲ್ ಆಡುತ್ತಿಲ್ಲ.
ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ತಂಡ ಎರಡು ತವರಿನ ಪಂದ್ಯಗಳಲ್ಲಿ ಆಡಲಿದೆ.
ಪ್ರಕೃತಿಯ ಪವಾಡ: ಅತ್ಯಂತ ಸುಂದರವಾದ 5 ಪಕ್ಷಿಗಳು
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ