ಭಾರತ ತಂಡದ ಫೀಲ್ಡಿಂಗ್​ ಕೋಚ್​ ಸ್ಥಾನಕ್ಕೆ ದಿಗ್ಗಜನ ಎಂಟ್ರಿ?

By Prasanna Kumar P N
Jun 19, 2024

Hindustan Times
Kannada

ಟಿ20 ವಿಶ್ವಕಪ್ ಮುಗಿದ ನಂತರ ಭಾರತ ತಂಡದ ಕೋಚಿಂಗ್​ ಸ್ಟಾಫ್​ನಲ್ಲಿ ಮಹತ್ವದ ಬದಲಾವಣೆ ಕಾಣಬಹುದು. 

ಶೀಘ್ರದಲ್ಲೇ ನೂತನ ಕೋಚ್ ನೇಮಕವಾಗಲಿದ್ದು, ಇದರೊಂದಿಗೆ ಇತರೆ ಕೋಚ್ ಸ್ಥಾನಗಳಿಗೂ ಹೊಸವರು ಆಯ್ಕೆಯಾಗಲಿದ್ದಾರೆ.

ಇದರ ನಡುವೆ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೌತ್ ಆಫ್ರಿಕಾ ದಿಗ್ಗಜ ಜಾಂಟಿ ರೋಡ್ಸ್ ನೇಮಕವಾಗಲಿದ್ದಾರೆ ಎನ್ನಲಾಗಿದೆ.

ವಿಶ್ವದ ಅತ್ಯುತ್ತಮ ಫೀಲ್ಡರ್​ ಎಂದು ಗುರುತಿಸಿಕೊಂಡಿರುವ ಜಾಂಟಿ ರೋಡ್ಸ್​ ಐಪಿಎಲ್​ನಲ್ಲಿ ಎಲ್​ಎಸ್​ಜಿ ಪರ ಸೇವೆ ಸಲ್ಲಿಸುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ಪರ 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಜಾಂಟಿ, 2019ರಲ್ಲೂ ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಬಿಸಿಸಿಐ ಆಯ್ಕೆಗೆ ಪರಿಗಣಿಸಿರಲಿಲ್ಲ.

ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಟಿ ದಿಲೀಪ್ ಸೇವೆ ಸಲ್ಲಿಸುತ್ತಿದ್ದಾರೆ. ರಾಹುಲ್ ದ್ರಾವಿಡ್ ಜೊತೆಗೆ ದಿಲೀಪ್ ಕೂಡ ಕಾರ್ಯಾವಧಿ ಕೂಡ ಮುಗಿಯಲಿದೆ.

ಹೀಗಾಗಿಯೇ ನೂತನ ಫೀಲ್ಡಿಂಗ್ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ಜಾಂಟಿ ರೋಡ್ಸ್​ ಅವರ ಆಯ್ಕೆಗೆ ಬಿಸಿಸಿಐ ಆಸಕ್ತಿ ಹೊಂದಿದೆ.

ಹೆಚ್ಚು ಸಾಕ್ಷರತೆ ಇರುವ ಭಾರತದ ಟಾಪ್‌ 10 ರಾಜ್ಯಗಳು