ಯುಎಸ್‌ ತಂಡದಲ್ಲಿ ಪೂರ್ಣಚಂದ್ರ ತೇಜಸ್ವಿ ಮಿತ್ರನ ಮಗ!

By Jayaraj
Jun 07, 2024

Hindustan Times
Kannada

ಪಾಕಿಸ್ತಾನ ವಿರುದ್ಧ ಯುಎಸ್‌ ಅಚ್ಚರಿಯ ಗೆಲುವು ಸಾಧಿಸಿದೆ. ಆ ಬಳಿಕ ತಂಡದ ಪರ ಆಡುತ್ತಿರುವ ಭಾರತೀಯ ಕ್ರಿಕೆಟಿಗರು ಸುದ್ದಿಯಲ್ಲಿದ್ದಾರೆ.

ಇವರಲ್ಲಿ ನೊಸ್ತುಷ್ ಕೆಂಜಿಗೆ ಕೂಡಾ ಒಬ್ಬರು.

ನೊಸ್ತುಷ್ ಕೆಂಜಿಗೆ, ಮೂಲತಃ ನಮ್ಮ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದವರು.

ಈಗ ಯುಎಸ್‌ ಕ್ರಿಕೆಟ್‌ ತಂಡದ ಪರ ಆಡುತ್ತಿದ್ದು, ಟಿ20 ವಿಶ್ವಕಪ್‌ನಲ್ಲಿ ಮಿಂಚುತ್ತಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪ್ರಮುಖ 3 ವಿಕೆಟ್‌ ಕಬಳಿಸಿ ಮಿಂಚಿದ್ದರು. 

ಉಸ್ಮಾನ್‌ ಖಾನ್‌, ಶದಾಬ್‌ ಖಾನ್‌ ಹಾಗೂ ಅಜಾಮ್‌ ಖಾನ್‌ ವಿಕೆಟ್‌ ಪಡೆದು ಆರಂಭದಲ್ಲೇ ಪಾಕ್‌ಗೆ ಆಘಾತ ನೀಡಿದರು.

ಕೆಂಜಿಗೆ ಅವರ ತಂದೆ ಪ್ರದೀಪ್ ಕೆಂಜಿಗೆ, ಕರ್ನಾಟಕದ ಕ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಮಿತ್ರ.

ಹಿಂದೆ ಬೆಂಗಳೂರಿನಲ್ಲಿ ಕ್ಲಬ್ ಕ್ರಿಕೆಟ್ ಆಡಿದ್ದರು. ಇದೀಗ ಯುಎಸ್​ಎ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಪ್ರತಿದಿನಿ ಬೆಳಗ್ಗೆ ನೆನೆಸಿಟ್ಟ ಧನಿಯಾ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳಿವು