ಐಪಿಎಲ್ ಫೈನಲ್; ಎಸ್ಆರ್ಹೆಚ್ ವಿರುದ್ಧ ಕೆಕೆಆರ್ನದ್ದೇ ದರ್ಬಾರ್
By Prasanna Kumar P N May 25, 2024
Hindustan Times Kannada
ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಎದುರಾಗುತ್ತಿವೆ.
ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ. ಉಭಯ ತಂಡಗಳ ಹೆಡ್ ಟು ಹೆಡ್ ರೆಕಾರ್ಡ್ಸ್ ದಾಖಲೆಯನ್ನು ಈ ಮುಂದೆ ನೋಡೋಣ.
ಪ್ರಸಕ್ತ ಆವೃತ್ತಿಯಲ್ಲಿ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿವೆ. ಲೀಗ್ನಲ್ಲಿ ಒಂದು ಬಾರಿ ಮತ್ತು ಮೊದಲ ಕ್ವಾಲಿಫೈಯರ್ನಲ್ಲಿ ಸೆಣಸಾಟ ನಡೆಸಿವೆ. ಆದರೆ ಕೆಕೆಆರ್ ಎರಡೂ ಪಂದ್ಯಗಳನ್ನು ಗೆದ್ದಿದೆ.
ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ಮತ್ತು ಎಸ್ಆರ್ಹೆಚ್ ತಂಡಗಳು ಒಟ್ಟು 27 ಬಾರಿ ಪರಸ್ಪರ ಎದುರಾಗಿವೆ. ಇಲ್ಲೂ ಸಹ ಕೋಲ್ಕತ್ತಾ ತಂಡವೇ ದರ್ಬಾರ್ ನಡೆಸಿದೆ.
27 ಮುಖಾಮುಖಿ ಪಂದ್ಯಗಳ ಪೈಕಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 18 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.
ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡವು 9 ಬಾರಿ ಮಾತ್ರ ಗೆದ್ದಿದೆ. ಇದೀಗ ಫೈನಲ್ನಲ್ಲಿ ಸೇಡಿನ ಸಮರಕ್ಕೆ ಸಿದ್ಧವಾಗಿದೆ.
ಉಭಯ ತಂಡಗಳ ನಡುವಿನ ಕೊನೆಯ 5 ಪಂದ್ಯಗಳಲ್ಲಿ ಕೆಕೆಆರ್ 3-2 ಅಂತರದಿಂದ ಮುನ್ನಡೆ ಸಾಧಿಸಿದೆ.
ಪ್ರಸಕ್ತ ಆವೃತ್ತಿಯಲ್ಲಿ ತಂಡಗಳು 2 ಬಾರಿ ಮಾತ್ರ ಎದುರಾಗಿದ್ದು, ಎರಡರಲ್ಲೂ ಕೆಕೆಆರ್ ಗೆದ್ದು ಬೀಗಿದೆ.