ಹೊಸ ಮೈಲಿಗಲ್ಲು ತಲುಪಲು ಕುಲ್ದೀಪ್‌ ಯಾದವ್‌ಗೆ ಬೇಕು 4 ವಿಕೆಟ್‌

By Jayaraj
Mar 05, 2024

Hindustan Times
Kannada

ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಕುಲ್ದೀಪ್‌ ಯಾದವ್‌ ಹೊಸ ಮೈಲಿಗಲ್ಲು ತಲುಪುವ ಹಂತದಲ್ಲಿದ್ದಾರೆ.

ಪ್ರಸಕ್ತ ಸರಣಿಯಲ್ಲಿ ಯಾದವ್ ಆಡಿದ ಮೂರು ಟೆಸ್ಟ್‌ಗಳಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ.

ಧರ್ಮಶಾಲಾ ಟೆಸ್ಟ್‌ನಲ್ಲಿ ಅವರು 4 ವಿಕೆಟ್‌ ಪಡೆದರೆ, ಹೊಸ ಮೈಲಿಗಲ್ಲು ತಲುಪಲಿದ್ದಾರೆ.

ಆ ಮೂಲಕ ಟೆಸ್ಟ್‌ನಲ್ಲಿ 50 ವಿಕೆಟ್‌ಗಳನ್ನು ಪೂರ್ಣಗೊಳಿಸಲಿದ್ದಾರೆ.

ಇದರೊಂದಿಗೆ ಎಲ್ಲಾ ಮೂರು ಸ್ವರೂಪಗಳಲ್ಲಿಯೂ ಕನಿಷ್ಠ 50 ವಿಕೆಟ್ ಕಬಳಿಸಿದ  ಭಾರತದ ಐದನೇ ಬೌಲರ್ ಎಂಬ ದಾಖಲೆ ಮಾಡಲಿದ್ದಾರೆ.

11 ಟೆಸ್ಟ್‌ಗಳಲ್ಲಿ 46 ವಿಕೆಟ್‌ಗಳ ಪಡೆದಿರುವ ಕುಲ್ದೀಪ್ ಏಕದಿನದಲ್ಲಿ 168 ಮತ್ತು ಟಿ20ಯಲ್ಲಿ 59 ವಿಕೆಟ್‌ ಪಡೆದಿದ್ದಾರೆ.

ಎಲ್ಲಾ 3 ಸ್ವರೂಪಗಳಲ್ಲಿಯೂ ಕನಿಷ್ಠ 50 ವಿಕೆಟ್ ಪಡೆದ ಇತರ ನಾಲ್ವರು ಭಾರತೀಯ ಬೌಲರ್‌ಗಳೆಂದರೆ ಅಶ್ವಿನ್, ಜಡೇಜಾ, ಬುಮ್ರಾ ಮತ್ತು ಭುವನೇಶ್ವರ್ ಕುಮಾರ್.

ಕನ್ನಡದ ವರನಟ ಡಾ.ರಾಜಕುಮಾರ್‌ ಆಂಜನೇಯನ ಪರಮಭಕ್ತ. ಹಲವು ಹಾಡುಗಳನ್ನುರಾಜಕುಮಾರ್‌ ಹಾಡಿದ್ದಾರೆ.